ಕರ್ನಾಟಕ

karnataka

ETV Bharat / state

ಮೊದಲ ಹಂತದ ಗ್ರಾ.ಪಂ. ಚುನಾವಣೆ: ತುಮಕೂರು ಜಿಲ್ಲೆಯಲ್ಲಿ 7,142 ಅಭ್ಯರ್ಥಿಗಳು ಕಣದಲ್ಲಿ - ತುಮಕೂರು ಗ್ರಾಮ ಪಂಚಾಯಿತಿ ಚುನಾವಣೆ

ಗ್ರಾಮ ಪಂಚಾಯಿತಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ ಚುನಾವಣೆಗೆ 7,142 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

ಮೊದಲ ಹಂತದ ಗ್ರಾಪಂ ಚುನಾವಣೆ
Gram Panchayat Election

By

Published : Dec 17, 2020, 7:12 AM IST

ತುಮಕೂರು:ಎಲ್ಲೆಡೆ ಗ್ರಾಮ ಪಂಚಾಯಿತಿ ಚುನಾವಣೆಯ ಅಬ್ಬರ ಜೋರಾಗಿದೆ. ಜಿಲ್ಲೆಯಲ್ಲಿ ಡಿ.22 ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಅಂತಿಮವಾಗಿ 7,142 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜಿಲ್ಲೆಯ ತುಮಕೂರು, ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ಪಾವಗಡ ತಾಲೂಕಿನ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಕ್ಕೆ ಡಿ.22ರಂದು ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 168 ಗ್ರಾಮ ಪಂಚಾಯಿತಿಗಳ 2,786 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗಿದ್ದು, ಈ ಪೈಕಿ ಗುಬ್ಬಿ ತಾಲೂಕಿನ 36 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಿರುವುದರಿಂದ ಖಾಲಿ ಉಳಿದಿವೆ. ಅವಿರೋಧವಾಗಿ 156 ಸದಸ್ಯರು ಆಯ್ಕೆಯಾಗಿದ್ದಾರೆ.

ಓದಿ: ಒಳ ಉಡುಪಿನಲ್ಲಿ ಅಕ್ರಮವಾಗಿ ಚಿನ್ನ ತಂದು ತಗ್ಲಾಕೊಂಡ ಇಬ್ಬರು ಮಹಿಳಾ ಪ್ರಯಾಣಿಕರು!

ಚುನಾವಣೆ ನಡೆಯಲಿರುವ 2,594 ಸದಸ್ಯ ಸ್ಥಾನಗಳಿಗೆ ಸ್ಪರ್ಧಿಸಲು 1,639 ಪರಿಶಿಷ್ಟ ಜಾತಿ, 639 ಪ.ಪಂಗಡ, 875 ಹಿಂದುಳಿದ ಅ ವರ್ಗ, 244 ಹಿಂದುಳಿದ ಬಿ ವರ್ಗ ಹಾಗೂ 3,745 ಸಾಮಾನ್ಯ ಅಭ್ಯರ್ಥಿಗಳು ಸೇರಿ ಒಟ್ಟು 7,142 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ABOUT THE AUTHOR

...view details