ಕರ್ನಾಟಕ

karnataka

ETV Bharat / state

ಹರಿಜನ ಗಿರಿಜನ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಅಭಿವೃದ್ಧಿ ಸಮಿತಿಗಳಿಗೆ ನೀಡಬೇಕು: ಬೇವಿನಹಳ್ಳಿ ಚನ್ನಬಸವಯ್ಯ - Secretary of State of Karnataka Madiga Dandora Committee

ಹರಿಜನ ಗಿರಿಜನ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬೇರೆ ಇಲಾಖೆಗೆ ಸರ್ಕಾರ ವರ್ಗಾಯಿಸಿದ್ದು, ಆ ಹಣವನ್ನು ಹಿಂಪಡೆಯುವ ಮೂಲಕ ನಮ್ಮ ಅಭಿವೃದ್ಧಿ ಬಯಸುವ ಸಮಿತಿ ಹಾಗೂ ನಿಗಮ ಮಂಡಳಿಗಳಿಗೆ ನೀಡಬೇಕೆಂದು ಕರ್ನಾಟಕ ಮಾದಿಗ ದಂಡೋರ ಸಮಿತಿಯ ರಾಜ್ಯ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.

tumkur
ಬೇವಿನಹಳ್ಳಿ ಚನ್ನಬಸವಯ್ಯ

By

Published : Oct 12, 2020, 5:02 PM IST

ತುಮಕೂರು: ಹರಿಜನ ಗಿರಿಜನ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬೇರೆ ಇಲಾಖೆಗೆ ಸರ್ಕಾರ ವರ್ಗಾಯಿಸಿದ್ದು, ಆ ಹಣವನ್ನು ಹಿಂಪಡೆಯುವ ಮೂಲಕ ನಮ್ಮ ಅಭಿವೃದ್ಧಿ ಬಯಸುವ ಸಮಿತಿ ಹಾಗೂ ನಿಗಮ ಮಂಡಳಿಗಳಿಗೆ ನೀಡಬೇಕು ಎಂದು ಮಾದಿಗ ದಂಡೋರ ಸಮಿತಿಯ ರಾಜ್ಯ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.

ಕರ್ನಾಟಕ ಮಾದಿಗ ದಂಡೋರ ಸಮಿತಿಯ ರಾಜ್ಯ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಹರಿಜನ ಗಿರಿಜನ ಅವರ ಅಭಿವೃದ್ಧಿಗಾಗಿ 2019 -20 ನೇ ಸಾಲಿನಲ್ಲಿ ಮೀಸಲಿಟ್ಟ 30,445 ಕೋಟಿ ಹಣವನ್ನು, ಆಯಾ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಅಭಿವೃದ್ಧಿಗೆ ಖರ್ಚು ಮಾಡದೇ, ಉಳಿದಿದ್ದಂತಹ 19,000 ಕೋಟಿ ಹಣವನ್ನು ಬೇರೆ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಹೇಳಿಕೆಯನ್ನು ನಮ್ಮ ಸಮುದಾಯ ಹಾಗೂ ಸಮಿತಿಯು ಖಂಡಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಆ ಹಣವನ್ನು ಹಿಂಪಡೆಯುವ ಮೂಲಕ ನಮ್ಮ ಅಭಿವೃದ್ಧಿ ಬಯಸುವ ಅನೇಕ ಸಮಿತಿಗಳು, ನಿಗಮ ಮಂಡಳಿಗಳಿಗೆ ನೀಡಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.

ABOUT THE AUTHOR

...view details