ತುಮಕೂರು :ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಹೋಗುತ್ತಿದ್ದ ಸಾರ್ವಜನಿಕರಿಗೆ ಪೊಲೀಸರು ಗುಲಾಬಿ ಹೂಗಳನ್ನು ನೀಡುವ ಮೂಲಕ ಗಾಂಧಿಗಿರಿ ಆಚರಿಸಿದರು.
ಗುಲಾಬಿ ಹೂವು ನೀಡಿ ರಸ್ತೆ ಸುರಕ್ಷತೆ ನಿಯಮ ಪಾಲಿಸುವಂತೆ ಪೊಲೀಸರ ಮನವಿ - request to abide by road safety rules
ಡಿಎಲ್ ಇನ್ಷೂರೆನ್ಸ್ ಮತ್ತು ವಾಹನದ ದಾಖಲಾತಿ ಕಡ್ಡಾಯವಾಗಿ ವಾಹನಗಳಲ್ಲಿ ಇರಿಸುವಂತೆ ತಿಳಿಸಿದರು. ಹುಳಿಯಾರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಕೇಟಿ ರಮೇಶ್ ನೇತೃತ್ವದಲ್ಲಿ ಜಾಗೃತಿ ಜಾಥಾ ಆಯೋಜಿಸಲಾಗಿತ್ತು..
![ಗುಲಾಬಿ ಹೂವು ನೀಡಿ ರಸ್ತೆ ಸುರಕ್ಷತೆ ನಿಯಮ ಪಾಲಿಸುವಂತೆ ಪೊಲೀಸರ ಮನವಿ ಪೊಲೀಸರ ಮನವಿ](https://etvbharatimages.akamaized.net/etvbharat/prod-images/768-512-10649969-1095-10649969-1613473656523.jpg)
ಪೊಲೀಸರ ಮನವಿ
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಹುಳಿಯಾರು ಪಟ್ಟಣದಲ್ಲಿ ಹೆಲ್ಮೆಟ್ ಇಲ್ಲದೆ ಹೋಗುತ್ತಿದ್ದ ಬೈಕ್ ಸವಾರರು ಹಾಗೂ ಸೀಟ್ ಬೆಲ್ಟ್ ಹಾಕದ ಕಾರ್ ಚಾಲಕರನ್ನು ನಿಲ್ಲಿಸಿ ಗುಲಾಬಿ ನೀಡಿ ಸುರಕ್ಷತೆಯತ್ತ ಗಮನಹರಿಸುವಂತೆ ಪೊಲೀಸ್ ಸಿಬ್ಬಂದಿ ಜಾಗೃತಿ ಮೂಡಿಸಿದರು.
ಸುರಕ್ಷತೆ ನಿಯಮ ಪಾಲಿಸುವಂತೆ ಪೊಲೀಸರ ಮನವಿ
ಡಿಎಲ್ ಇನ್ಷೂರೆನ್ಸ್ ಮತ್ತು ವಾಹನದ ದಾಖಲಾತಿ ಕಡ್ಡಾಯವಾಗಿ ವಾಹನಗಳಲ್ಲಿ ಇರಿಸುವಂತೆ ತಿಳಿಸಿದರು. ಹುಳಿಯಾರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಕೇಟಿ ರಮೇಶ್ ನೇತೃತ್ವದಲ್ಲಿ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.