ಕರ್ನಾಟಕ

karnataka

ETV Bharat / state

ಮನೆ ಬಾಗಿಲು ಮುರಿದು ನಡುರಾತ್ರಿ ಸಿನಿಮೀಯ ರೀತಿ ಬಾಲಕಿ ಅಪಹರಣ - ​​​ತುಮಕೂರು ಬಾಲಕಿ ಅಪರಣ ಪ್ರಕರಣ

ಮನೆ ಬಾಗಿಲು ಮುರಿದು ನಡುರಾತ್ರಿ ಬಾಲಕಿ ಅಪಹರಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

Tumkur
​​​ತುಮಕೂರು

By

Published : Mar 14, 2022, 1:08 PM IST

​​​ತುಮಕೂರು:ಸಿನಿಮೀಯ ರೀತಿಯಲ್ಲಿ ಮನೆಯ ಬಾಗಿಲು ಮುರಿದು ನಡುರಾತ್ರಿ ಬಾಲಕಿ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಪುರದಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೋಷಕರು ಮಲಗಿದ್ದ ವೇಳೆ ಬಾಗಿಲು ಮುರಿದು ಒಳಗೆ ನುಗ್ಗಿದ ಆರೋಪಿ, ದ್ವೀತಿಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪೋಷಕರ ಎದುರಿನಲ್ಲಿಯೇ ಬೈಕ್​ನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ.

ಈ ಸಂದರ್ಭದಲ್ಲಿ ಪೋಷಕರು ಎಷ್ಟೇ ಪ್ರತಿರೋಧ ವ್ಯಕ್ತಪಡಿಸಿದರು ಮಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಆರೋಪಿ ಯುವತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮೈಸೂರು : ಕುಕ್ಕರಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

ABOUT THE AUTHOR

...view details