ತುಮಕೂರು :ಭಾರತದಲ್ಲೂ ತಾಲಿಬಾನಿಗಳು, ಭಯೋತ್ಪಾದಕರು ಇದ್ರೆ ನಮ್ಮ ಸೈನ್ಯ ನೋಡಿಕೊಳ್ಳುತ್ತದೆ. ಗಡಿಯಲ್ಲಿ ಭಯೋತ್ಪಾದಕರು, ತಾಲಿಬಾನಿಗಳು ನುಗ್ಗಿದರೆ ನಮ್ಮ ಸೈನ್ಯ ಅವರನ್ನು ಹೊಡೆದು ಹಾಕುತ್ತದೆ ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ಸಿದ್ದರಾಮಯ್ಯನವರ 'ತಾಲಿಬಾನಿ ಹೇಳಿಕೆ' ಕುರಿತು ಪ್ರತಿಕ್ರಿಯಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೀಳು ಮಾತುಗಳು, ಕೀಳು ರಾಜಕಾರಣ ಮಾಡಬಾರದು ಎಂದರು. ನಾವು ಜನಪ್ರತಿನಿಧಿಗಳು, ಅದನ್ನು ಮೊದಲು ಅರ್ಥಮಾಡಿಕೊಂಡು ಹೇಳಿಕೆ ಕೊಡಬೇಕು. ನಾವು ಜನರನ್ನು ಪ್ರತಿನಿಧಿಸುತ್ತೇವೆ.
ಹೀಗಾಗಿ, ಜನಪ್ರತಿನಿಧಿಗಳು ಸಂಯಮ, ನಿಷ್ಠೆಯಿಂದ ಇರಬೇಕು ಎಂದು ಜನರು ಬಯಸುತ್ತಾರೆ. ಸಾರ್ವಜನಿಕವಾಗಿ ಒಬ್ಬರಿಗೊಬ್ಬರು ಅವಹೇಳನಕಾರಿಯಾದ ಮಾತನ್ನು ಆಡುವುದು ಸರಿಯಲ್ಲ, ಎರಡೂ ಪಕ್ಷದವರ ಕೆಸರೆರಚಾಟ ಸರಿಯಲ್ಲ ಎಂದರು.