ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮತದಾರರು ನನ್ನನ್ನು ಎರಡು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದರು. ಆದ್ರೆ ಒಳ್ಳೆಯ ಟೈಮ್ನಲ್ಲಿ ಪಲ್ಟಿ ಹೊಡೆಸಿದ್ದಾರೆ. ಇದರಿಂದಾಗಿ ನಾನು ಮುಖ್ಯಮಂತ್ರಿಯಾಗುವುದು ತಪ್ಪಿದಂತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದರು.
ಮತದಾರರು ನನ್ನನ್ನು 2 ಬಾರಿ ಗೆಲ್ಲಿಸಿದ್ರು.. ಸಿಎಂ ಆಗಬೇಕು ಅನ್ನೋ ಟೈಮಲ್ಲಿ ಪಲ್ಟಿ ಹೊಡೆಸಿದ್ರು: ಜಿ ಪರಮೇಶ್ವರ್
ಕೊರಟಗೆರೆ ಕ್ಷೇತ್ರದ ಜನ 2 ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಆದರೆ ಒಳ್ಳೆ ಟೈಮ್ನಲ್ಲಿ ಪಲ್ಟಿ ಹೊಡೆಸಿದ್ದಾರೆ. ಹಣೆಬರಹ ಸರಿ ಇದ್ದಿದ್ದರೆ 2013 ರಲ್ಲಿ ನಾನು ಮುಖ್ಯಮಂತ್ರಿ ಆಗುತ್ತಿದ್ದೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ಜಿ ಪರಮೇಶ್ವರ್
ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ನಡೆದ ನಮ್ಮೂರ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2013 ರಲ್ಲಿ ಒಂದೇ ಒಂದು ಮತದಲ್ಲಿ ಗೆದ್ದಿದ್ದರೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಇತ್ತು. ಆದ್ರೆ ನಂಗೂ ಹಣೆಬರಹ ಇರಬೇಕಲ್ಲಾ, ಕೇವಲ ನಿಮ್ಮ ಬಗ್ಗೆ ಹೇಳಿದ್ರೆ ಆಗುವುದಿಲ್ಲ. ಹಾಗಾಗಿ, ಪರವಾಗಿಲ್ಲ ಬಿಡಿ ಎಂದು ಮುಖ್ಯಮಂತ್ರಿ ಆಗುವ ಕನಸು ನನಸಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:'ಕಾಲಚಕ್ರ ಹೀಗೆಯೇ ಇರುವುದಿಲ್ಲ..' ಜಿಲ್ಲಾಧಿಕಾರಿ ವಿರುದ್ಧ ಜಿ.ಪರಮೇಶ್ವರ್ ಗರಂ