ತುಮಕೂರು: ಹಿಂದೂ ಧರ್ಮ ಬಹಳ ಶ್ರೇಷ್ಠವಾದದ್ದು, ಹಿಂದೂ ಧರ್ಮ ಕೊಟ್ಟ ಅನೇಕ ವಿಚಾರಧಾರೆಗಳನ್ನು ಚರ್ಚೆ ಮಾಡಿ ಸಮಾಜಕ್ಕೆ ಇನ್ನೊಮ್ಮೆ ತಿಳಿಸುವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಜಿ ಪರಮೇಶ್ವರ್ ಹೇಳಿದರು.
ಕೊರಟಗೆರೆ ತಾಲೂಕಿನ ಚಿಕ್ಕತೊಟ್ಲುಕೆರೆ ಅಟವಿ ಮಠದಲ್ಲಿ ಧರ್ಮಗೋಷ್ಠಿ ಮತ್ತು ಗೋ ಪೂಜೆ ಆಯೋಜನೆ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಬಗ್ಗೆ ಗೊಂದಲ ಎದ್ದಿದೆ. ಅದಕ್ಕೆ ಸ್ಪಷ್ಟೀಕರಣವನ್ನು ಈ ಧರ್ಮ ಸಭೆಯಲ್ಲಿ ನೀಡಲಾಗುವುದು. ಸಮಾಜಕ್ಕೆ, ಮನುಕುಲಕ್ಕೆ ಒಳ್ಳೆದಾಗಬೇಕು ಎನ್ನುವ ಉದ್ದೇಶದಿಂದ ಗೋ ಪೂಜೆ ಮಾಡುತಿದ್ದೇವೆ. 1,108 ದಂಪತಿಗಳಿಂದ ಗೋ ಪೂಜೆ ನಡೆಯಲಿದೆ ಎಂದರು.