ಕರ್ನಾಟಕ

karnataka

ETV Bharat / state

ಕಾಲು ಮುರಿದುಕೊಂಡ ಎತ್ತು: ಕಣ್ಣೀರು ಹಾಕುತ್ತಿದ್ದ ರೈತನಿಗೆ ಜಿ.ಪರಮೇಶ್ವರ್ ಸಾಂತ್ವನ

ಎತ್ತು ಕಾಲು ಮುರಿದುಕೊಂಡಿದ್ದು ಹೊಲದಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದ ರೈತನಿಗೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಸಮಾಧಾನಪಡಿಸಿದರು.

ಜಿ.ಪರಮೇಶ್ವರ್
ಜಿ.ಪರಮೇಶ್ವರ್

By

Published : Aug 19, 2021, 9:30 AM IST

ತುಮಕೂರು: ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯೆ ರೈತನೊಬ್ಬ ಹೊಲದಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡು ಮರುಗಿದರು.

ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಭೂಮಿ ಹದ ಮಾಡುತ್ತಿದ್ದ ವೇಳೆ ಎತ್ತಿನ ಕಾಲು ಮುರಿದು ಒದ್ದಾಡುತ್ತಿತ್ತು. ಇದರಿಂದ ಮನನೊಂದ ರೈತ ಕಣ್ಣೀರು ಹಾಕುತ್ತಾ ಕುಳಿತಿದ್ದನು. ಕೊರಟಗೆರೆ ತಾಲೂಕಿನ ಚಿಂಪ ಗಾನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಪರಮೇಶ್ವರ್, ಈ ರೈತನನ್ನು ನೋಡಿ ಕಾರು ನಿಲ್ಲಿಸಿ, ಆತನ ಬಳಿಗೆ ಬಂದು ಸಂತೈಸಿದರು.

ರೈತನನ್ನು ಸಂತೈಸಿದ ಜಿ.ಪರಮೇಶ್ವರ್

ಹೊಲದಲ್ಲಿ ಕೆಲಕಾಲ ನಿಂತು ರೈತನ ಸಂಕಷ್ಟ ಆಲಿಸಿದ ಪರಮೇಶ್ವರ್, ನಂತರ ಕಾಲು ಮುರಿದು ಬಿದ್ದಿರುವ ಎತ್ತಿನಿಂದ ಮುಂದಿನ ದಿನಗಳಲ್ಲಿ ಉಳುಮೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೃಷಿ ಚಟುವಟಿಕೆ ನಡೆಸಲು ಅಗತ್ಯವಿರುವ ಎತ್ತು ಖರೀದಿಸಲು ಆರ್ಥಿಕ ಸಹಕಾರ ನೀಡುತ್ತೇನೆ ಎಂದು ಸಮಾಧಾನ ಹೇಳಿದರು. ಬಳಿಕ ಅವರು ಮುಂದಿನ ಕ್ಷೇತ್ರದ ಪ್ರವಾಸ ಕೈಗೊಂಡರು.

ABOUT THE AUTHOR

...view details