ತುಮಕೂರು : ತುರುವೇಕೆರೆಯ ಮುಸ್ಲಿಂ ಯುವಕರ ತಂಡವೊಂದು ಕೋವಿಡ್ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡುತ್ತಿದೆ. ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರ ಮಾಡಲು ಹಿಂದೇಟು ಹಾಕುವ ಕುಟುಂಬಸ್ಥರಿಗೆ ಈ ತಂಡ ನೆರವಾಗುತ್ತಿದೆ.
ಮುಸ್ಲಿಂ ಯುವಕರು ಮಾಡಿದರು ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ!
ಕಳೆದ ಒಂದೂವರೆ ತಿಂಗಳಿನಿಂದ 15 ಯುವಕರು ಎರಡು ತಂಡಗಳಾಗಿ ಮಾಡಿಕೊಂಡು ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಯಾವುದೇ ಸಮುದಾಯದ ವ್ಯಕ್ತಿ ಮೃತಪಟ್ಟರೂ ಅವರವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುತ್ತಾರೆ.
ಮುಸ್ಲಿಂ ಯುವಕರಿಂದ ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ!
ಕಳೆದ ಒಂದೂವರೆ ತಿಂಗಳಿನಿಂದ 15 ಯುವಕರು ಎರಡು ತಂಡಗಳಾಗಿ ಮಾಡಿಕೊಂಡು ಈ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ಸಮುದಾಯದ ವ್ಯಕ್ತಿ ಮೃತಪಟ್ಟರೂ ಅವರವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುತ್ತಾರೆ.
ಬಹುತೇಕ ಕಡೆ ಕುಟುಂಬಸ್ಥರು ಮೃತದೇಹದ ಹತ್ತಿರವೇ ಸುಳಿಯುವುದಿಲ್ಲ. ಆದರೂ, ಈ ಯುವಪಡೆ ಆಸ್ಪತ್ರೆಯಿಂದ ಜಮೀನಿಗೆ ಅಥವಾ ಸ್ಮಶಾನಕ್ಕೆ ಮೃತದೇಹ ಕೊಂಡೊಯ್ದು ಅಂತ್ಯಕ್ರಿಯೆ ಮಾಡುತ್ತಾರೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಈ ಕಾರ್ಯ ಮಾಡುತ್ತಾರೆ. ಅಫ್ಜಲ್ ಹಾಗೂ ಸ್ನೇಹ ಬಳಗ ಯಾವುದೇ ಫಲಾಪೇಕ್ಷೆಯಿಲ್ಲದೆ ಈ ಕಾರ್ಯದಲ್ಲಿ ತೊಡಗಿದೆ.