ತುಮಕೂರು: ಪಾವಗಡದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವ ಮುನ್ನ ನೀಡಿದ್ದ ಭರವಸೆಯಂತೆ ಸ್ಥಳೀಯ ಯುವಕ-ಯುವತಿಯರಿಗೆ ಉದ್ಯೋಗ ನೀಡಿ, ಯೋಜನೆಯಡಿ ಒಳಪಡುವ ಗ್ರಾಮಗಳ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪಿ ಸಾಂಬಸದಾಶಿವರೆಡ್ಡಿ ಒತ್ತಾಯಿಸಿದರು.
ಸೋಲಾರ್ ಪಾರ್ಕ್ಗೆ ಭೂಮಿ ನೀಡಿದವರ ಭರವಸೆ ಈಡೇರಿಸಿ: ಸಾಂಬಸದಾಶಿವರೆಡ್ಡಿ - ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಸೋಲಾರ್ ಪಾರ್ಕ್
ತುಮಕೂರಿನ ಪಾವಗಡದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವ ಮುನ್ನ ನೀಡಿದ ಬೇಡಿಕೆ ಈಡೇರಿಸುವಂತೆ ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪಿ ಸಾಂಬಸದಾಶಿವರೆಡ್ಡಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಾರ್ ಪಾರ್ಕ್ಗೆ ಜಮೀನು ನೀಡಿರುವ ಪ್ರತಿಯೊಬ್ಬ ರೈತನ ಜಮೀನಿಗೆ ಇರುವ ಚಕ್ ಬಂದಿಯನ್ನು ಗುರುತಿಸಿ, ಸರ್ವೆ ನಂಬರ್ ಹಾಗೂ ರೈತರ ಹೆಸರನ್ನು ಒಳಗೊಂಡ ನಾಮಫಲಕವನ್ನು ಅಳವಡಿಸಬೇಕು. ರೈತರು ತಮ್ಮ ಜಮೀನುಗಳನ್ನು 28 ವರ್ಷಗಳವರೆಗೆ ಬಾಡಿಗೆ ನೀಡಲಾಗಿದೆ. ಈ ಜಮೀನು ನಮ್ಮದೇ ಎಂದು ಗುರುತಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ನಾಮಫಲಕಗಳನ್ನು ಅಳವಡಿಸುವುದು ಅತ್ಯಾವಶ್ಯಕವಾಗಿದೆ ಎಂದರು.
ಸೋಲಾರ್ ಪಾರ್ಕ್ ಇರುವ ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು, ಶಿಥಿಲಗೊಂಡಿರುವ ಶಾಲೆಗಳನ್ನು ಅಭಿವೃದ್ಧಿಪಡಿಸುವುದು, ಸೋಲಾರ್ ಪಾರ್ಕ್ಗೆ ಜಮೀನು ನೀಡಿರುವ ಗ್ರಾಮಗಳಿಗೆ ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.