ತುಮಕೂರು:ಬೆಂಗಳೂರಿನ ಕೆಆರ್ಪುರಂ ನಲ್ಲಿರುವ ಇಂಡಿಯನ್ ಐಎಎಸ್ ಅಂಡ್ ಕೆಎಎಸ್ ಕೋಚಿಂಗ್ ಅಕಾಡೆಮಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 3 ತಿಂಗಳುಗಳ ಕಾಲ ಉಚಿತ ತರಬೇತಿ ನೀಡಲಾಗುವುದು ಎಂದು ಕೋಚಿಂಗ್ ಅಕಾಡೆಮಿಯ ಸಂಯೋಜಕ ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.
ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ - Indian IAS and KAS Coaching Academy
ಆಸಕ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೆಎಎಸ್, ಪಿಎಸ್ಐ, ಎಫ್ಡಿಎ, ಎಸ್ಡಿಎ, ಪಿಡಿಒ ಹಾಗೂ ಬ್ಯಾಂಕಿಂಗ್ ವಿಷಯಗಳು ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಇಂಡಿಯನ್ ಐಎಎಸ್ ಅಂಡ್ ಕೆಎಎಸ್ ಕೋಚಿಂಗ್ ಅಕಾಡೆಮಿಯ ಸಂಯೋಜಕ ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರ್ ರೆಡ್ಡಿ, ಕೆಎಎಸ್, ಪಿಎಸ್ಐ, ಎಫ್ಡಿಎ, ಎಸ್ಡಿಎ, ಪಿಡಿಒ ಹಾಗೂ ಬ್ಯಾಂಕಿಂಗ್ ವಿಷಯಗಳು ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜೊತೆಗೆ, ಆಗಸ್ಟ್ 6ರಿಂದ ಬ್ಯಾಚ್ ಪ್ರಾರಂಭವಾಗಲಿದ್ದು, ನೇರವಾಗಿ ಅಕಾಡೆಮಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು. ಶಿಬಿರದಲ್ಲಿ ಭಾಗವಹಿಸುವವರಿಗೆ ಊಟ, ವಸತಿ ಸೌಲಭ್ಯ ನೀಡಲಾಗುವುದಿಲ್ಲ. ಆದರೆ, ಕಲಿಕೆಗೆ ಬೇಕಾದಂತಹ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದೆಂದು ಮಾಹಿತಿ ನೀಡಿದರು.