ಕರ್ನಾಟಕ

karnataka

ETV Bharat / state

ಠಾಣೆ ಆವರಣದಲ್ಲೇ ಅಸಭ್ಯ ವರ್ತನೆ: ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು - ತುಮಕೂರು ಪೊಲೀಸರ ಸುದ್ದಿ

ಪೊಲೀಸ್ ಠಾಣೆ ಆವರಣದಲ್ಲೇ ಮದ್ಯಪಾನ ಮಾಡಿ ಜೂಜಾಟ ಆಡಿ ಪರಸ್ಪರ ಕಿತ್ತಾಡಿಕೊಂಡಿದ್ದ ಆರೋಪದ ಮೇಲೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ.

ನಾಲ್ವರು ಪೊಲೀಸ್ ಸಿಬ್ಬಂದಿಗಳ ಅಮಾನತು
ನಾಲ್ವರು ಪೊಲೀಸ್ ಸಿಬ್ಬಂದಿಗಳ ಅಮಾನತು

By

Published : Jun 12, 2020, 1:39 PM IST

ತುಮಕೂರು:ಪೊಲೀಸ್ ಠಾಣೆ ಆವರಣದಲ್ಲೇ ಮದ್ಯಪಾನ ಮಾಡಿ ಜೂಜಾಟ ಆಡಿ ಪರಸ್ಪರ ಕಿತ್ತಾಡಿಕೊಂಡಿದ್ದ ಆರೋಪದ ಮೇಲೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ.

ಇವರೆಲ್ಲರೂ ಜಿಲ್ಲೆಯ ಹೆಬ್ಬೂರು ಪೊಲೀಸ್ ಠಾಣೆಯ ಸಿಬ್ಬಂದಿ. ರಾಮಚಂದ್ರಪ್ಪ, ಮಹೇಶ್, ಚಲುವರಾಜು, ಸಂತೋಷ್ ಅಮಾನತುಗೊಂಡವರು.

ಈ ಕಾನ್ಸ್​ಟೆಬಲ್​ಗಳು ಕಿತ್ತಾಡಿಕೊಂಡ ಬಗ್ಗೆ ಎಸ್ಪಿ ಗಮನಕ್ಕೆ ಪೊಲೀಸ್ ಅಧಿಕಾರಿಗಳು ತಂದಿದ್ದರು. ಪೊಲೀಸ್ ಅಧಿಕಾರಿಗಳು ನೀಡಿದ್ದ ವರದಿಯನ್ನು ಆಧರಿಸಿ ಎಸ್ಪಿ ವಂಶಿಕೃಷ್ಣ ಅವರು ಈ ನಾಲ್ವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details