ತುಮಕೂರು:2005ರ ಪಾವಗಡ ವೆಂಕಟಮ್ಮನಹಳ್ಳಿ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರಾಗಿದ್ದ ನಾಲ್ವರು ಮಾಜಿ ನಕ್ಸಲರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾವಗಡ ತಾಲೂಕು ನ್ಯಾಯಾಲಯದಲ್ಲಿ ಪ್ರಕರರಣದ ವಿಚಾರಣೆ ನಡೆಯುತ್ತಿದೆ. ಆದರೆ ಆರೋಪಿಗಳು ಹಲವು ಬಾರಿ ವಿಚಾರಣೆಗೆ ಗೈರು ಹಾಜರಾಗಿದ್ದರು. ಆಂಧ್ರ ಪ್ರದೇಶದ ವಿವಿಧ ಭಾಗದಲ್ಲಿ ಇವರನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆಯಲಾಗಿದೆ.
ಪಾವಗಡ ವೆಂಕಟಮ್ಮನಹಳ್ಳಿ ಸ್ಫೋಟ ಪ್ರಕರಣ: ನಾಲ್ವರು ಮಾಜಿ ನಕ್ಸಲರು ಪೊಲೀಸ್ ವಶಕ್ಕೆ - ಪಾವಗಡ ವೆಂಕಟಮ್ಮನಹಳ್ಳಿ
2005ರಲ್ಲಿ ಪಾವಗಡ ವೆಂಕಟಮ್ಮನಹಳ್ಳಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಾಜಿ ನಕ್ಸಲರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್
Published : Jan 8, 2024, 11:07 AM IST
ಸ್ಫೋಟ ಪ್ರಕರಣದಲ್ಲಿ ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಘಟನೆಯಲ್ಲಿ ಐವರು ಪೊಲೀಸರು ಸಾವನ್ನಪ್ಪಿದ್ದರು.
ಇದನ್ನೂ ಓದಿ:ಮಾಲೂರು ಶಾಸಕ ಕೆ.ವೈ.ನಂಜೇಗೌಡ ನಿವಾಸ, ಕಚೇರಿಗಳ ಮೇಲೆ ಇಡಿ ದಾಳಿ