ಕರ್ನಾಟಕ

karnataka

ETV Bharat / state

ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ: ಸುಧಾಕರ್ ಹೇಳಿಕೆಗೆ ಮಧು ಬಂಗಾರಪ್ಪ ಕಿಡಿ - ಸಚಿವ ಸುಧಾಕರ್

ವಿಧಾನಸಭೆಯಲ್ಲಿ ಅಂತಹ ಚರ್ಚೆಗಳನ್ನು ಮಾಡಲು ಕೆಲಸವಿಲ್ಲವೇ? ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಭಾರತಾಂಬೆ ಎಂದು ಹೇಳಿಕೊಂಡು ಓಡಾಡುವ ಬಿಜೆಪಿಯವರ ನಡವಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಜನಪ್ರತಿನಿಧಿಗಳಾಗಿ ಸಾಕಷ್ಟು ಕೆಲಸ ಮಾಡಬೇಕಿದೆ. ಅದಕ್ಕೆ ಹೆಚ್ಚು ಒತ್ತು ಕೊಡಲಿ ಎಂದು ಮಧು ಬಂಗಾರಪ್ಪ ಹೇಳಿದರು.

Former mla Madhu Bangarappa
ಮಧು ಬಂಗಾರಪ್ಪ

By

Published : Mar 25, 2021, 3:07 PM IST

ತುಮಕೂರು:ರಾಜ್ಯಾದಾದ್ಯಂತ ಸಚಿವ ಸುಧಾಕರ್ ನೀಡಿರುವ ಏಕಪತ್ನಿ ವ್ರತಸ್ಥ ಹೇಳಿಕೆಗೆ ಆಕ್ರೋಶ ವ್ಯಕ್ತವಾಗ್ತಿದೆ. ಇದೀಗ ಮಾಜಿ ಶಾಸಕ ಮಧು ಬಂಗಾರಪ್ಪ ಸುಧಾಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದು, ಬಿಜೆಪಿಯವ್ರಿಗೆ ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದ್ದಾರೆ.

ವಿಧಾನಸಭೆಯಲ್ಲಿ ಅಂತಹ ಚರ್ಚೆಗಳನ್ನು ಮಾಡಲು ಕೆಲಸವಿಲ್ಲವೇ? ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಭಾರತಾಂಬೆ ಎಂದು ಹೇಳಿಕೊಂಡು ಓಡಾಡುವ ಬಿಜೆಪಿಯವರ ನಡವಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಜನಪ್ರತಿನಿಧಿಗಳಾಗಿ ಸಾಕಷ್ಟು ಕೆಲಸ ಮಾಡಬೇಕಿದೆ. ಅದಕ್ಕೆ ಹೆಚ್ಚು ಒತ್ತು ಕೊಡಲಿ ಎಂದರು.

ಸುಧಾಕರ್ ಹೇಳಿಕೆಗೆ ಮಧು ಬಂಗಾರಪ್ಪ ಕಿಡಿ

ಅಲ್ಲದೆ ರೈತ ಮುಖಂಡ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರೈತ ಹೋರಾಟ ಸಮಾವೇಶದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಶಿವಮೊಗ್ಗ ಕಾಂಗ್ರೆಸ್ ಕಚೇರಿಗೆ ತೆರಳಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ:ಇನ್ನೂ 10 ಸಿಡಿ ಬಂದರೂ ಎದುರಿಸುತ್ತೇನೆ, ಷಡ್ಯಂತ್ರ ಮಾಡಿದವರನ್ನ ಜೈಲಿಗೆ ಕಳಿಸುತ್ತೇನೆ: ಜಾರಕಿಹೊಳಿ ಗುಡುಗು

ABOUT THE AUTHOR

...view details