ಕರ್ನಾಟಕ

karnataka

ETV Bharat / state

ಶಿರಾ ವಿಚಾರಕ್ಕೆ ಬಂದ್ರೆ ಹುಷಾರ್: ಸಚಿವ ಮಾಧುಸ್ವಾಮಿ ವಿರುದ್ಧ ಗುಡುಗಿದ ಟಿ ಬಿ ಜಯಚಂದ್ರ

ನಾವು ಕೆರೆಗೆ ಹೇಮಾವತಿ ನೀರು ಹರಿಸುವಂತೆ ಕೇಳುತ್ತಿರುವುದು ಭಿಕ್ಷೆ ಅಲ್ಲ. ಬದಲಾಗಿ ನ್ಯಾಯಯುತವಾದ ಬೇಡಿಕೆಯಾಗಿದೆ ಎಂದು ಮಾಜಿ ಸಚಿವ ಟಿ.ಬಿ ಜಯಚಂದ್ರ ತಿಳಿಸಿದ್ದಾರೆ.

former-minister-t-b-jayachandra
ಮಾಜಿ ಸಚಿವ ಟಿ ಬಿ ಜಯಚಂದ್ರ

By

Published : Aug 12, 2021, 10:59 PM IST

ತುಮಕೂರು: ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿಯೊಬ್ಬರು ಪ್ರಸ್ತುತ ಚಕಾರವೆತ್ತುತ್ತಿಲ್ಲ. ಯಾರ ಶಾಪವೋ ಏನೋ ಇಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿಲ್ಲ ಎಂದು ಯಡಿಯೂರಪ್ಪ ವಿರುದ್ದ ಮಾಜಿ ಸಚಿವ ಟಿ.ಬಿ ಜಯಚಂದ್ರ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಶಿರಾ ಉಪಚುನಾವಣೆ ವೇಳೆ ಮುಖ್ಯಮಂತ್ರಿಯಾಗಿದ್ದ ಬಿಎಸ್​ವೈ ಇನ್ನು ಆರು ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಅಂಕಿ-ಅಂಶವಿಲ್ಲದೆ ಹೇಳಲು ಸಾಧ್ಯವಿಲ್ಲ. ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಹಂಚಿಕೆ ಇಲ್ಲ ಎಂದು ಹೇಳಬೇಕಿತ್ತು ಎಂದಿದ್ದಾರೆ.

ಮಾಜಿ ಸಚಿವ ಟಿ ಬಿ ಜಯಚಂದ್ರ

ಆದರೆ, ಪ್ರಸ್ತುತ ಕಾನೂನು ಸಚಿವರಾಗಿರುವ ಜೆ. ಸಿ ಮಾಧುಸ್ವಾಮಿ ಮದಲೂರು ಕೆರೆಗೆ ನೀರಿನ ಹಂಚಿಕೆ ಇಲ್ಲ ಎನ್ನುತ್ತಿದ್ದಾರೆ. ಕೇವಲ ತಮ್ಮ ಹುಟ್ಟೂರು ಜೆಸಿ ಪುರದ ಮಾಧುಸ್ವಾಮಿ ಆಗಬಾರದು. ಕರ್ನಾಟಕದ ಕಾನೂನು ಸಚಿವರಾಗಿ ಎಂದು ಕಿವಿಮಾತು ಹೇಳಿದರು.

ಕಾನೂನು ಬಿಟ್ಟು ಮಾತನಾಡಲು ಹೋಗಬೇಡಿ. ಗೊಂದಲ ಸೃಷ್ಟಿಸಿ ಅವಾಂತರ ಮಾಡಿಕೊಂಡಿರುವುದು ಜನರಿಗೆ ಗೊತ್ತಿದೆ. ಮಂತ್ರಿನೇ ಆಗಿರಬಹುದು, ಏನೇ ಆಗಿರಬಹುದು. ಶಿರಾ ವಿಚಾರಕ್ಕೆ ಬಂದ್ರೆ ಹುಷಾರ್, ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಆದರೆ, ಜನಸಮೂಹದ ಮೇಲೆ ಯಾವುದೇ ಒತ್ತಡ ತರಲು ಬಿಡುವುದಿಲ್ಲ ಎಂದಿದ್ದಾರೆ.

ಹೋರಾಟಕ್ಕೆ ಸಿದ್ದವಾಗಿದ್ದೇವೆ: ನಾವು ಕೆರೆಗೆ ಹೇಮಾವತಿ ನೀರು ಹರಿಸುವಂತೆ ಕೇಳುತ್ತಿರುವುದು ಭಿಕ್ಷೆ ಅಲ್ಲ. ಬದಲಾಗಿ ನ್ಯಾಯಯುತವಾದ ಬೇಡಿಕೆಯಾಗಿದೆ. ಸಂವಿಧಾನ ಬದ್ದವಾಗಿರುವಂತಹುದು. ಕುಡಿಯುವ ನೀರಿಗಾಗಿ ಕೇಳುತ್ತಿರುವುದು. ಇದರ ವಿಚಾರದಲ್ಲಿ ಪುನಃ ಏನಾದ್ರು ಮಾಡಿದ್ರೂ ಹೋರಾಟಕ್ಕೆ ಸಿದ್ದವಾಗಿದ್ದೇವೆ ಎಂದು ತಿಳಿಸಿದ್ದಾರೆ.

ಶಿರಾ ತಾಲೂಕಿಗೆ ಅಗತ್ಯವಿರುವ ನೀರಿನ ಸೌಲಭ್ಯದ ದೃಷ್ಟಿಯಿಂದ ಭದ್ರ ಮೇಲ್ದಂಡೆ ಯೋಜನೆಯನ್ನು ರೂಪಿಸಲಾಗಿದೆ. ಸಿದ್ದರಾಮಯ್ಯ ಮತ್ತು ನಾನು ನೀರಾವರಿ ಯೋಜನೆಗಳನ್ನು ರೂಪಿಸಿದ್ದೇವೆ. ಅದೇ ರೀತಿ ಎತ್ತಿನಹೋಳೆ ಯೋಜನೆಯನ್ನು ಅನುಷ್ಟಾನಕ್ಕೆ ತಂದಿದ್ದೇವೆ ಎಂದಿದ್ದಾರೆ.

ಓದಿ:ತನಿಖೆ ಪ್ರಗತಿಯಲ್ಲಿರುವಾಗ ಮಾಹಿತಿ ಸೋರಿಕೆ ಮಾಡಿದರೆ ತನಿಖಾಧಿಕಾರಿ ವಿರುದ್ಧ ಶಿಸ್ತುಕ್ರಮ: ಸುತ್ತೋಲೆ ಹೊರಡಿಸಿದ ಸರ್ಕಾರ

ABOUT THE AUTHOR

...view details