ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಸಿವಿಲ್ ತಾಲಿಬಾನ್​​​​: ಸೊಗಡು ಶಿವಣ್ಣ ಆಕ್ರೋಶ - ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿಕೆ

ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗ್ತೀನಿ ಅಂತಾನೆ, ಹಂದಿ ತಿಂದು ಮಸೀದಿಗೆ ಹೋಗಲಿ ನೋಡೋಣ. ಮುಸಲ್ಮಾನರನ್ನು ಓಲೈಸಲು ಈ ರೀತಿ ಮಾತಾಡ್ತಿಯಲ್ಲ, ನಾಚಿಕೆ ಆಗಲ್ವಾ ನಿನಗೆ‌ ಎಂದು ಏಕವಚನದಲ್ಲೇ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದರು.

ಸೊಗಡು ಶಿವಣ್ಣ ವಾಗ್ದಾಳಿ
ಸೊಗಡು ಶಿವಣ್ಣ ವಾಗ್ದಾಳಿ

By

Published : Sep 29, 2021, 2:14 PM IST

ತುಮಕೂರು: ಸಿದ್ದರಾಮಯ್ಯ ಸಿವಿಲ್ ತಾಲಿಬಾನ್, ಆರ್​​ಎಸ್​​ಎಸ್​​ ತಾಲಿಬಾನ್ ಎಂದಿದ್ದ ಸಿದ್ದರಾಮಯ್ಯಗೆ ಮಾಜಿ ಸಚಿವ ಸೊಗಡು ಶಿವಣ್ಣ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ’’ಸಿದ್ದರಾಮಯ್ಯ ಮೀರ್ ಸಾದಿಕ್ ಇದ್ದ ಹಾಗೆ. ಅವನಿಗೆ ಮಾನ ಮರ್ಯಾದೆ ಏನು ಇಲ್ಲ, ಇದ್ದಿದ್ರೆ ಹೀಗೆ ಮಾತನಾಡುತ್ತಿರಲಿಲ್ಲ‘‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

’’ಜೆಡಿಎಸ್​​​ನಲ್ಲಿ ಇದ್ದಾಗ ಕಾಂಗ್ರೆಸ್ ಅವರನ್ನ ಜೈಲಿಗೆ ಹಾಕಿಸ್ತೀನಿ ಅಂತಿದ್ದ. ಕಾಂಗ್ರೆಸ್​​ಗೆ ಹೋಗಿ ಮುಖ್ಯಮಂತ್ರಿಯಾದ. ತನ್ನ ಅಧಿಕಾರದ ಅವಧಿಯಲ್ಲಿ ಜಾತಿ ಜಾತಿಗಳನ್ನು ವಿಭಜನೆ ಮಾಡಿದ. ಹಿಂದುಗಳನ್ನು ಒಡೆಯುವುದು, ಮುಸಲ್ಮಾನರನ್ನು ಓಲೈಸುವುದನ್ನ ಮಾಡಿದ್ದಾನೆ‘‘ ಎಂದು ಸೊಗಡು ಶಿವಣ್ಣ ಏಕವಚನದಲ್ಲೆ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಸೊಗಡು ಶಿವಣ್ಣ ತಿರುಗೇಟು

’’ಅವನಿಗೆ ಮಾನ ಮರ್ಯಾದೆ ಇಲ್ಲ. ನೂರು ವರ್ಷದ ಇತಿಹಾಸ ಇರುವ ಆರ್​​ಎಸ್​​ಎಸ್ ದೇಶಕ್ಕೆ ಪ್ರಾಣತ್ಯಾಗ ಮಾಡಿದೆ. ಆರ್​​ಎಸ್​​ಎಸ್ ಹುಟ್ಟಿದಾಗ ಸಿದ್ದರಾಮಯ್ಯ ಹುಟ್ಟೇ ಇರಲಿಲ್ಲ. ಸಿದ್ದರಾಮಯ್ಯ ಒಂತರಾ ಜಂಗ್ಲಿ ಇದ್ದಂಗೆ, ಎಲ್ಲಾ ಕಡೆ ತಿರುಗಿ ಹತಾಶನಾಗಿದ್ದಾನೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನಾವೆಲ್ಲರೂ ಜೈಲಿಗೆ ಹೋಗಿದ್ದು, ಆಗ ಸಿದ್ದರಾಮಯ್ಯ ಎಲ್ಲಿಗೆ ಹೋಗಿದ್ದ. ಅಂದು ಮೀರ್ ಸಾಧಿಕ್ ತರ ವರ್ತಿಸಿ ಇಂದು ನಮ್ಮನ್ನು ತಾಲಿಬಾನ್ ಅಂತಾನೆ, ಮಾನ ಮರ್ಯಾದೆ ಇಲ್ವಾ‘‘ ಎಂದು ಕೇಳಿದ್ದಾರೆ.

ABOUT THE AUTHOR

...view details