ತುಮಕೂರು : ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಸಚಿವ ಮಾಧುಸ್ವಾಮಿ ಅಡ್ಡಿಯಾಗುತ್ತಿದ್ದಾರೆ ಎಂದು ಮಾಜಿ ಕಾನೂನು ಸಚಿವ ಟಿ ಬಿ ಜಯಚಂದ್ರ ವಾಗ್ದಾಳಿ ನಡೆಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದಲೂರು ಕೆರೆಗೆ ಹೇಮಾವತಿ ನೀರು ಬಿಡಲು ಸರ್ಕಾರದ ಆದೇಶವಿದೆ. ಆದರೂ ಮಾಧುಸ್ವಾಮಿ ಅಡ್ಡಿಯಾಗುತ್ತಿದ್ದಾರೆ. ಮಾಧುಸ್ವಾಮಿ ನೀರಾವರಿ ಹೋರಾಟಗಾರರಲ್ಲ. ನಾವು ನೀರಿಗಾಗಿ ಹೋರಾಟ ಮಾಡುವಾಗ ಮಾಧುಸ್ವಾಮಿ ಅಡ್ರೆಸ್ ಇರಲಿಲ್ಲ ಎಂದು ಕುಟುಕಿದರು.
ಸಚಿವ ಮಾಧುಸ್ವಾಮಿ ವಿರುದ್ಧ ಮಾಜಿ ಸಚಿವ ಟಿ ಬಿ ಜಯಚಂದ್ರ ಕಿಡಿ.. ಆದರೂ ಕೂಡ ಇವತ್ತು ಅವರು ದೊಡ್ಡ ದೊಡ್ಡ ಮಾತನಾಡುತ್ತಾರೆ. ಮಾಧುಸ್ವಾಮಿಗಿಂತ ಮೊದಲು ನಾನು ಲಾಯರ್ ಆಗಿದ್ದವನು. ಅವರಿಗಿಂತ ಕಾನೂನಿನ ಹೆಚ್ಚಿನ ಅನುಭವ ನನಗಿದೆ. ಮಾಧುಸ್ವಾಮಿ ಬಹಳ ಬುದ್ಧಿವಂತರು ಎಂದು ಕೇಳ್ಪಟ್ಟಿದೇನೆ ಎಂದು ವ್ಯಂಗ್ಯವಾಡಿದರು.
ಮದಲೂರು ಕೆರೆಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳುವ ಮೊದಲು, ಅವರು ಸ್ವಲ್ಪ ಪ್ರಜ್ಞೆಯಿಂದ ಮಾತನಾಡಲಿ. ಬಿಜೆಪಿ ಸಂಸದ ಜಿ.ಎಸ್ ಬಸವರಾಜು, ನಾನು, ಬಸವರಾಜ್ ಬೊಮ್ಮಾಯಿ ನೀರಾವರಿ ಯೋಜನೆ ಬಗ್ಗೆ ಚಿಂತನೆ ನಡೆಸಿದ್ದೇವೆ. ಮಾಧುಸ್ವಾಮಿ ಹೋರಾಟ ಮಾಡಿದವರಲ್ಲ. ಹಾಗಾಗಿ, ಅವರಿಗೆ ನೀರು ಬಿಡಲ್ಲ ಎನ್ನುವ ನೈತಿಕತೆಯಿಲ್ಲ ಎಂದರು.
ಇದನ್ನೂ ಓದಿ : Video : ಗುಡ್ಡದ ಮೇಲಿಂದ ಹರಿದು ಬರುತ್ತಿದೆ ಕ್ಷೀರ.. ಅಚ್ಚರಿ ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ..