ಕರ್ನಾಟಕ

karnataka

ETV Bharat / state

7 ವರ್ಷಗಳಲ್ಲಿ 40 ಬಾರಿ ತೈಲ ಬೆಲೆ ಏರಿಕೆಯಾಗಿದೆ: ಡಾ.ಜಿ.ಪರಮೇಶ್ವರ್ - 7 ವರ್ಷಗಳಲ್ಲಿ 40 ಬಾರಿ ತೈಲ ಬೆಲೆ ಏರಿಕೆಯಾಗಿದೆ ಡಾ. ಜಿ.ಪರಮೇಶ್ವರ್

ಕಾಂಗ್ರೆಸ್​​ನ ಸಮರ್ಥ ಆಡಳಿತವನ್ನು ಬಿಜೆಪಿಗೆ ನೆನಪಿಸಲು ಜಾಥಗಳನ್ನು ಅಯೋಜಿಸಲಾಗುತ್ತಿದೆ. ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಸರಕಾರದ ವೈಫಲ್ಯಗಳನ್ನು ನೆನಪಿಸಲು ಕಾಂಗ್ರೆಸ್ ನಿರಂತರ ಪ್ರಯತ್ನಿಸುತ್ತಿದೆ. ಆದ್ರೆ ಅದ್ಯಾವುದೂ ಬಿಜೆಪಿ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದು ಡಾ.ಜಿ.ಪರಮೇಶ್ವರ್ ಟೀಕಿಸಿದ್ದಾರೆ.

Former Deputy Prime Minister Dr. G Parameshwar Statement in Tumakur
ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಆರೋಪ

By

Published : Jul 7, 2021, 10:57 PM IST

ತುಮಕೂರು: ಜಿಲ್ಲಾ ಪಂಚಾಯತ್ ಕ್ಷೇತ್ರ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಸರ್ಕಾರಕ್ಕೆ ಅನುಕೂಲಕ್ಕೆ ತಕ್ಕಂತೆ ಮಾಡಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.

ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಆರೋಪ

ನಗರದಲ್ಲಿ ಕೇಂದ್ರದ ವಿರುದ್ಧ ಸೈಕಲ್ ಜಾಥಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ಅವೈಜ್ಞಾನಿಕ ಜಿ.ಪಂ ಕ್ಷೇತ್ರ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಕಾಂಗ್ರೆಸ್ ಲೀಗಲ್ ಸೆಲ್ ಮೂಲಕ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿದೆ ಎಂದರು.

ಕಾಂಗ್ರೆಸ್​​ನ ಸಮರ್ಥ ಆಡಳಿತವನ್ನು ಬಿಜೆಪಿಗೆ ನೆನಪಿಸಲು ಜಾಥಾಗಳನ್ನು ಅಯೋಜಿಸಲಾಗುತ್ತಿದೆ. ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಸರಕಾರದ ವೈಫಲ್ಯಗಳನ್ನು ನೆನಪಿಸಲು ಕಾಂಗ್ರೆಸ್ ನಿರಂತರ ಪ್ರಯತ್ನಿಸುತ್ತಿದೆ. ಆದ್ರೆ ಅದ್ಯಾವುದೂ ಬಿಜೆಪಿ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದರು. ಕೇಂದ್ರ ಸರ್ಕಾರ 7 ವರ್ಷಗಳಲ್ಲಿ 40 ಬಾರಿ ತೈಲ ಬೆಲೆ ಏರಿಕೆ ಮಾಡಿದೆ. ಇದಕ್ಕೆ ಅರ್ಥವಿಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: 2 ರೂಪಾಯಿಗೆ ಔಷಧ​, 8 ಲಕ್ಷ ರೋಗಿಗಳ ಸೇವೆ: ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಡಾ.ಮಹೇಂದ್ರಭಾಯ್​

For All Latest Updates

ABOUT THE AUTHOR

...view details