ಕರ್ನಾಟಕ

karnataka

ETV Bharat / state

ಬಿಟ್ ಕಾಯಿನ್ ಪ್ರಕರಣದ ತನಿಖೆಯ ಮಾಹಿತಿಯನ್ನ ಬಹಿರಂಗಪಡಿಸಬೇಕು : ಜಿ ಪರಮೇಶ್ವರ್

ಅಧಿಕಾರದಲ್ಲಿರುವವರು ಇದರಲ್ಲಿ ಹಸ್ತಕ್ಷೇಪ ಹೊಂದಿದ್ದರೆ ಅವರು ಅಧಿಕಾರವನ್ನು ತ್ಯಜಿಸಬೇಕು. ಬೇರೆ ಬೇರೆಯವರು ಇದರಲ್ಲಿ ಇದ್ದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು..

ತುಮಕೂರಿನಲ್ಲಿ ಜಿ ಪರಮೇಶ್ವರ್ ಹೇಳಿಕೆ
ತುಮಕೂರಿನಲ್ಲಿ ಜಿ ಪರಮೇಶ್ವರ್ ಹೇಳಿಕೆ

By

Published : Nov 19, 2021, 5:45 PM IST

ತುಮಕೂರು :ಬಿಟ್-ಕಾಯಿನ್ ವಿಚಾರವಾಗಿ ಖಚಿತ ಮಾಹಿತಿ ಮೇರೆಗೆ ಶ್ರೀಕಿಯನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ. ಈ ತನಿಖೆಯ ಮಾಹಿತಿಯನ್ನ ಬಹಿರಂಗಪಡಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಬಿಟ್‌ ಕಾಯಿನ್‌ ದಂಧೆ ಕುರಿತಂತೆ ಮಾಜಿ ಡಿಸಿಎಂ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿರುವುದು..

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಹೇಳುತ್ತಿರುವುದು ಸುಳ್ಳು ಎಂದು ಬಿಜೆಪಿ ಪ್ರತಿಪಾದನೆ ಮಾಡಿದರೆ, ಶ್ರೀಕಿಯನ್ನು ಯಾಕೆ ಬಂಧಿಸಲಾಗಿದೆ. ಸ್ಪಷ್ಟ ಆಧಾರವಿಲ್ಲದೆ ಯಾರನ್ನು ಬಂಧಿಸುವುದಿಲ್ಲ ಎಂಬುದು ಇದರಿಂದ ಮನವರಿಕೆಯಾಗುತ್ತದೆ ಎಂದರು.

ಅಧಿಕಾರದಲ್ಲಿರುವವರು ಇದರಲ್ಲಿ ಹಸ್ತಕ್ಷೇಪ ಹೊಂದಿದ್ದರೆ ಅವರು ಅಧಿಕಾರವನ್ನು ತ್ಯಜಿಸಬೇಕು. ಬೇರೆ ಬೇರೆಯವರು ಇದರಲ್ಲಿ ಇದ್ದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ನಟಿ ಕಂಗನಾ ರಾಣಾವತ್ ವಿವಾದಿತ ಹೇಳಿಕೆ ಕುರಿತು ಪ್ರತಿಕ್ರಯಿಸಿದ ಪರಮೇಶ್ವರ್, ಅವರಿಗೆ ಸರಿಯಾದ ಪರಿಜ್ಞಾನ ಇಲ್ಲ. ದೇಶದ ಇತಿಹಾಸವನ್ನು ಅವರು ಒಮ್ಮೆ ಸರಿಯಾಗಿ ಓದಿಕೊಳ್ಳಬೇಕಿದೆ. ಅವರಿಗೆ ಅಕಸ್ಮಾತಾಗಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ ಎಂದರು.

ABOUT THE AUTHOR

...view details