ತುಮಕೂರು: SSLC ಪರೀಕ್ಷೆ ವಂಚಿತ ವಿದ್ಯಾರ್ಥಿನಿ ಗ್ರೀಷ್ಮ ಮನೆಗೆ ಇಂದು ಡಾ.ಜಿ ಪರಮೇಶ್ವರ್ ಭೇಟಿ ನೀಡಿ ಧೈರ್ಯ ತುಂಬಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಿತ್ತು. ಆದ್ರೆ, ಪರೀಕ್ಷೆ ಬರೆಯಲು ಅರ್ಜಿಯನ್ನೇ ಸಲ್ಲಿಸದ ಕಾರಣ ಈ ಬಾರಿ ಅವಕಾಶ ದೊರೆಯದೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ಇಂದು ಕೊರಟಗೆರೆಯಲ್ಲಿರುವ ಮನೆಗೆ ತೆರಳಿ ವಿದ್ಯಾರ್ಥಿನಿಗೆ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಧೈರ್ಯ ತುಂಬಿದರು. ನನ್ನ ವಿಧಾನಸಭಾ ಕ್ಷೇತ್ರದಲ್ಲಿಯೇ ಇರುವ ವಿದ್ಯಾರ್ಥಿನಿ ಎಂಬ ವಿಷಯ ತಿಳಿದು ಭೇಟಿಯಾಗಿದ್ದೇನೆ. ಸಮಸ್ಯೆ ಬಗೆಹರಿಯಲಿದೆ.