ತುಮಕೂರು :ಬೊಮ್ಮಾಯಿಯವರು ಪೂರ್ಣಾವಧಿ ಮುಗಿಸಲಿ ಅನ್ನೋದು ನಮ್ಮ ಆಸೆ. ಆದರೆ, ಒಳ್ಳೆ ಸರ್ಕಾರ ಕೊಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಬೊಮ್ಮಾಯಿ ಅವ್ರಿಗೆ ಒಳ್ಳೆ ಆಡಳಿತ ಕೊಡಲಾಗ್ತಿಲ್ಲ ಅಂತಾ ಮಾಜಿ ಡಿಸಿಎಂ ಪರಮೇಶ್ವರ್ ಹೇಳಿಕೆ ನೀಡಿರುವುದು.. ನಗರದಲ್ಲಿ ಮಾತನಾಡಿದ ಅವರು, ಬೊಮ್ಮಾಯಿಯವರಿಗೆ ಉತ್ತಮ ಆಡಳಿತ ಕೊಡಲು ಆಗ್ತಿಲ್ಲ. ಆಡಳಿತಕ್ಕೆ ಚುರುಕು ಮುಟ್ಟಿಸಲಾಗ್ತಿಲ್ಲ. ಅಂದ ಮೇಲೆ ಅವರು ಅಧಿಕಾರದಲ್ಲಿ ಮುಂದುವರಿಬೇಕು ಅಂತಾ ಹೇಗೆ ಅನ್ಸುತ್ತೆ ಎಂದು ಪ್ರಶ್ನಿಸಿದ್ರು.
ಸುಮ್ನೆ ಮಾತಾಡೋದಲ್ಲ
ಆರ್ಎಸ್ಎಸ್ ಬಗ್ಗೆ ಕುಮಾರಸ್ವಾಮಿ ದಾಖಲೆ ಸಹಿತ ಮಾತಾಡಲಿ, ಯಾರ್ಯಾರು ಸಂಘ ಪರಿವಾರದಿಂದ ತರಬೇತಿ ಪಡೆದು ಐಎಎಸ್ ಅಧಿಕಾರಿಯಾಗಿದ್ದಾರೆ ಅನ್ನೋದನ್ನ ಹೆಸರಿಸಲಿ ಎಂದು ಸವಾಲ್ ಎಸೆದರು. ಸುಮ್ಮನೆ ಆರೋಪ ಮಾಡೋದಲ್ಲ. ಹೆಸರು ಸಹಿತ ಹೇಳಲಿ, ಆರ್ಎಸ್ಎಸ್ ಏನು, ಯಾವ ಉದ್ದೇಶಕ್ಕೆ ಬಂದಿದೆ ಅನ್ನೋದು ಚರ್ಚೆ ನಡೀಬೇಕು ಎಂದರು.
ನಮ್ಮ ಆಸಕ್ತಿ ಪ್ರಶ್ನೆ ಬರಲ್ಲ
ಸಿದ್ದರಾಮಯ್ಯನವರು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಲು ಹೈಕಮಾಂಡ್ ಆಯ್ಕೆ ಮಾಡುತ್ತೆ. ಅದ್ರಲ್ಲಿ ನಮ್ಮ ಆಸಕ್ತಿ ಪ್ರಶ್ನೆ ಬರಲ್ಲ ಎಂದರು.