ಕರ್ನಾಟಕ

karnataka

ETV Bharat / state

'ಬಿಜೆಪಿ ಸಂಸದ ಬಸವರಾಜ್ ಅವರನ್ನು ಕಾಂಗ್ರೆಸ್​ಗೆ ಆಹ್ವಾನಿಸಿದ್ರೂ ಬರಲಿಲ್ಲ': ಡಾ. ಜಿ. ಪರಮೇಶ್ವರ್ - ತುಮಕೂರು ಬಿಜೆಪಿ ಸಂಸದ ಜಿ.ಎಸ್ ಬಸವರಾಜು

ಕುಡಿದ ನೀರು ಅಲ್ಲಾಡದಂಗೆ ನೋಡ್ಕೋತಿವಿ ಅಂದ್ರೂ ಬಿಜೆಪಿ ಸಂಸದ ಬಸವರಾಜ್ ಕಾಂಗ್ರೆಸ್​ಗೆ ಬರಲಿಲ್ಲ. ನಾನು ಬಿಜೆಪಿಯಲ್ಲಿಯೇ ಉಳಿದುಕೊಳ್ಳೋದಾಗಿ ಹೇಳಿ ಅಲ್ಲೇ ಉಳಿದುಕೊಂಡಿದ್ದಾರೆ ಎಂದು ಡಾ. ಜಿ ಪರಮೇಶ್ವರ್ ಹೇಳಿದರು.

Former DCM Dr. G Parameshwar
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತ ಕಾರ್ಯಕ್ರಮ

By

Published : Jun 25, 2020, 10:15 PM IST

ತುಮಕೂರು:ಕಾಂಗ್ರೆಸ್​​ಗೆ ವಾಪಸ್ ಬಂದ್ಬಿಡಿ ತಲೆ ಮೇಲೆ ಹೊತ್ತುಕೊಂಡು ನಿಮ್ಮನ್ನು ಎಂಪಿ ಮಾಡ್ಕೋತಿವಿ ಎಂದು ತುಮಕೂರು ಬಿಜೆಪಿ ಸಂಸದ ಜಿ.ಎಸ್ ಬಸವರಾಜುಗೆ ಭರವಸೆ ಕೊಟ್ಟಿದ್ದೇ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದರು.

ತುಮಕೂರು ತಾಲೂಕು ಕೋರ ಗ್ರಾಮದಲ್ಲಿ ನಡೆದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಅವರು ಬಹಿರಂಗಪಡಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತ ಕಾರ್ಯಕ್ರಮದಲ್ಲಿ ಡಾ. ಜಿ. ಪರಮೇಶ್ವರ್ ಮಾತು

ಕುಡಿದ ನೀರು ಅಲ್ಲಾಡದಂಗೆ ನೋಡ್ಕೋತಿವಿ ಅಂದ್ರೂ ಬಿಜೆಪಿ ಸಂಸದ ಬಸವರಾಜ್ ಬರಲಿಲ್ಲ. ಅಲ್ಲದೇ ನಾನು ಬಿಜೆಪಿಯಲ್ಲಿಯೇ ಉಳಿದುಕೊಳ್ಳೋದಾಗಿ ಹೇಳಿ ಅಲ್ಲೇ ಉಳಿದುಕೊಂಡಿದ್ದಾರೆ. ಇಂದು ತುಮಕೂರು ಸಂಸದರಾಗಿದ್ದಾರೆ ಎಂದರು.

ರಾಜಕಾರಣದಲ್ಲಿ ಆ ಪಕ್ಷ ಈ ಪಕ್ಷ ಎಂಬ ವ್ಯತ್ಯಾಸವಿರುತ್ತೆ. ಸಾರ್ವಜನಿಕ ಬದುಕಿಗೆ ಬಂದಾಗ ನಾವು ಪ್ರತಿನಿಧಿಸುವ ಕ್ಷೇತ್ರ, ರಾಜ್ಯ ಹಾಗೂ ದೇಶದ ವಿಚಾರ ಬಂದಾಗ ನಮ್ಮಲ್ಲಿ ವ್ಯತ್ಯಾಸ ಇರಲ್ಲ ಎಂದರು. ಹಾಗೂ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಯಾವುದೇ ರಾಜಕಾರಣ ಮಾಡಬಾರದು ಎಂದು ಇದೇ ವೇಳೆ ತಿಳಿಸಿದರು.

ABOUT THE AUTHOR

...view details