ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಹೇಳಿದಂತೆ ಕೋಲಾರದಲ್ಲೇ ಸ್ಪರ್ಧಿಸಬಹುದು: ಮಾಜಿ ಡಿಸಿಎಂ ಜಿ ಪರಮೇಶ್ವರ್

ತುಮಕೂರಿನ ಸಿದ್ದಗಂಗಾ ಮಠಕ್ಕೆ ಕುಟುಂಬ ಸಮೇತ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದ ಮಾಜಿ ಡಿಸಿಎಂ ಪರಮೇಶ್ವರ್​ -​ ಶೀಘ್ರದಲ್ಲೇ ವಿಧಾನಸಭೆ ಕ್ಷೇತ್ರವಾರು ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿ ಪಟ್ಟಿ ಬಿಡುಗಡೆ

By

Published : Jan 20, 2023, 9:34 PM IST

Updated : Jan 21, 2023, 6:12 AM IST

Former CM Parameshwar
ಮಾಜಿ ಸಿಎಂ ಜಿ ಪರಮೇಶ್ವರ್

ತುಮಕೂರು:ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ನಾನು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಕೋಲಾರದಲ್ಲಿ ಸ್ಪರ್ಧಿಸುತ್ತೇನೆಂದು ಅವರೇ ಘೋಷಣೆ ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ, ಸ್ವಾಮೀಜಿಯ ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ನನಗೆ ಅನಿಸುತ್ತದೆ ಅಲ್ಲಿಯೇ ‌ನಿಲ್ಲಬಹುದು. ಅಂತಿಮವಾಗಿ ನಮ್ಮ ಹೈ ಕಮಾಂಡ್‌ ಅವರಿಗೆ ಎಲ್ಲಿ ಟಿಕೆಟ್ ಕೊಡುತ್ತದೋ ಗೊತ್ತಿಲ್ಲ. ಈ‌ ಬಾರಿ ಅವರು ಎರಡು ಕ್ಷೇತ್ರದಲ್ಲಿ ನಿಲ್ಲೋದಿಲ್ಲ ಎಂದರು.

ಎರಡು ಕ್ಷೇತ್ರದಲ್ಲಿ ಟಿಕೆಟ್ ಕೊಡುವ ವಿಚಾರ ಇಲ್ಲ: ಹಾಗಾಗಿ ಎರಡು ಕ್ಷೇತ್ರದಲ್ಲಿ ಟಿಕೆಟ್ ಕೊಡುವ ಪ್ರಶ್ನೆ ಉದ್ಭವ ಆಗೋದಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬರುವ‌ ವಿಚಾರ ಬಗ್ಗೆ ಪ್ರತಿಕ್ರಿಯೆಸಿದ ಅವರು, ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದವರೇ ಆಗಿದ್ದಾರೆ. ಅವರ ಮುಖಂಡತ್ವದಲ್ಲೇ ಎಲ್ಲವೂ ನಡೆಯುತ್ತಿದೆ. ರಾಹುಲ್ ಗಾಂಧಿ ಕೂಡ ಬರ್ತಾರೆ. ಬಿಜೆಪಿಯವರು ಬಂದ್ರೆ ನಮ್ಮವರೂ ಬರಲ್ಲಾ ಅಂತಿಲ್ಲಾ, ನಮ್ಮವರೂ ಬರುತ್ತಾರೆ ಎಂದು ಸ್ಟಷ್ಟ ಪಡಿಸಿದರು.

ಶ್ರೀಗಳ ಸಂಸ್ಮರಣೋತ್ಸವ: ನಾಳೆ ಶಿವೈಕ್ಯ ಶಿವಕುಮಾರ ಶ್ರೀಗಳ ಸಂಸ್ಮರಣೋತ್ಸವ ಹಿನ್ನೆಲೆ ಇಂದೇ ಮಠಕ್ಕೆ ಭೇಟಿ ಕೊಟ್ಟು ಗೌರವ ಸಮರ್ಪಣೆ ಮಾಡಿದ್ದೇನೆ. ನಾನು ಅತಿಥಿಯಾಗಿ ಬರಬೇಕಿತ್ತು. ಆದರೆ ನಾಳೆ ಮಂಗಳೂರಿನಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮದ ಇದೆ. ಹಾಗಾಗಿ ಶ್ರೀಗಳ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರಲು ಸಾಧ್ಯ ಆಗೋದಿಲ್ಲ. ಹಾಗಾಗಿ ಇಂದೇ ಬಂದು ಗೌರವ ಸಮರ್ಪಣೆ ಮಾಡಿದ್ದೇನೆ ಎಂದು ಹೇಳಿದರು.

ಪ್ರಧಾನಿ ಮೋದಿ ರಾಜ್ಯಕ್ಕೆ ಬರುವುದು ವಿಶೇಷವಲ್ಲ: ಮೋದಿ ರಾಜ್ಯಕ್ಕೆ ಪದೇ ಪದೆ ಭೇಟಿ ಮಾಡೋದರಲ್ಲಿ ಯಾವುದೇ ವಿಶೇಷತೆ ಇಲ್ಲ. ಅವರು ಈ ರಾಷ್ಟ್ರದ ಪ್ರಧಾನಿಗಳು ಹಾಗೂ ಬಿಜೆಪಿಯನ್ನು ಮುನ್ನಡೆಸುವ ನಾಯಕರು. ಕರ್ನಾಟಕದಲ್ಲಿ ಚುನಾವಣೆ ಸಮೀಪಸುತ್ತಿದೆ. ಹಾಗಾಗಿ ಕ್ಯಾಂಪೇನ್ ಉದ್ದೇಶ ಇಟ್ಟುಕೊಂಡು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.

ಗೃಹ ಲಕ್ಷ್ಮಿ ಯೋಜನೆ:ಕಾಂಗ್ರೆಸ್ ಗೃಹ ಲಕ್ಷ್ಮಿ ಯೋಜನೆ ಗೊಂದಲ ಹಿನ್ನೆಲೆ ಯೋಜನೆಯ ರೂಪುರೇಷೆಗಳನ್ನು ನಾವು ಇನ್ನೂ ಮಾಡಿಲ್ಲ. ವರ್ಷಕ್ಕೆ 24 ಸಾವಿರ ಕೋಟಿ ರೂ ಬೇಕಾಗುತ್ತದೆ ಎಂದು ಅಂದಾಜಿಸಿದ್ದು. ಅದನ್ನು ನಾವು ಯಾವ‌ ಯಾವ ವರ್ಗದವರಿಗೆ ಅಥವಾ ಮನೆಯ ಒಬ್ಬರಿಗೆ ಕೊಡಬೇಕಾ ಅನ್ನೋದನ್ನ ನಿರ್ಧಾರ ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೆಲ್ಲ ಸೇರಿ ನಿರ್ಧಾರ ಮಾಡುತ್ತೇವೆ. ನಾನೂ ಪ್ರಣಾಳಿಕೆ ಸಮಿತಿ ಅಧ್ಯಕ್ಷನಿದ್ದೇನೆ. ಈ‌ ವಿಚಾರವನ್ನು ನಾವು ಅಂತಿಮವಾಗಿ ಚರ್ಚೆ ಮಾಡಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಆದರೆ, ಪ್ರಣಾಳಿಕೆ ಯೋಜನೆಗಳು ಜನರಿಗೆ ಬಂಪರ್ ಕೊಡುಗೆ ನೀಡಲಿವೆ ಎಂದು ಅಭಿಪ್ರಾಯ ತಿಳಿಸಿದರು.

ಟಿಕೆಟ್ ಪಟ್ಟಿ ಬಿಡುಗಡೆ ವಿಚಾರ:ಆದಷ್ಟು ಶೀಘ್ರದಲ್ಲೇ ವಿಧಾನಸಭೆ ಕ್ಷೇತ್ರವಾರು ಅಭ್ಯರ್ಥಿಗಳ ಹೆಸರನ್ನು ಪೈನಲ್ ಮಾಡಿ ಬಿಡುಗಡೆ ಮಾಡುತ್ತೇವೆ. ಆ ನಿಟ್ಟಿನಲ್ಲಿ ಕೆಲಸ ಜೋರಾಗಿ ನಡೆಯುತ್ತಿದೆ. ಈಗಾಗಲೇ ಒಂದನೇ ಸಭೆ ಮುಗಿದಿದೆ. ಇನ್ನೂ ಎರಡನೇ ಸಭೆ ಮುಗಿದ ಬಳಿಕ ಹೆಸರನ್ನು ಹೈ ಕಮಾಂಡ್ ಗೆ ಕಳುಹಿಸುತ್ತೇವೆ. ಅಲ್ಲಿಂದ ಒಪ್ಪಿಗೆಯಾಗಿ ಬಂದ ನಂತರ ಬಿಡುಗಡೆಗೊಳಿಸಲಾಗುವುದು ಎಂದರು.

ಇದನ್ನೂಓದಿ:ಕೇಂದ್ರದ ವಿವಿಧ ಹುದ್ದೆಗಳಿಗೆ ನೇಮಕಾತಿ: 71 ಸಾವಿರ ಮಂದಿಗೆ ಪ್ರಧಾನಿ ಮೋದಿಯಿಂದ ನೇಮಕಾತಿ ಪತ್ರ

Last Updated : Jan 21, 2023, 6:12 AM IST

ABOUT THE AUTHOR

...view details