ತುಮಕೂರು: ಶಿರಾ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮತದಾರರಿಗೆ 200 ರೂ ಹಂಚುವ ಬದಲು ನನ್ನ ಸರಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಬಳಸಿಕೊಂಡು ಕೆರೆಗಳನ್ನು ತುಂಬಿಸಿ ಎಂದು ಕುಟುಕಿದ್ದಾರೆ.
ಶಿರಾ ಉಪಚುನಾವಣೆಗೆ ಬಿಜೆಪಿ ಹಣ ಹಂಚಿಕೆ ಆರೋಪ: ಕುಟುಕಿದ ಎಚ್ಡಿಕೆ
ಶಿರಾ ಉಪಚುನಾವಣೆಗೆ ಬಿಜೆಪಿಯಿಂದ ಹಣ ಹಂಚಲಾಗುತ್ತಿದೆ ಆರೋಪ ಹಿನ್ನೆಲೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮತದಾರರಿಗೆ 200 ರೂ ಹಂಚುವ ಬದಲು ನನ್ನ ಸರಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಬಳಸಿಕೊಂಡು ಕೆರೆಗಳನ್ನು ತುಂಬಿಸಿ ಎಂದು ಹೇಳಿದ್ದಾರೆ.
ತುಮಕೂರು
ತಾವರೆಕೆರೆ ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕೃಷ್ಣ ಮೇಲ್ದಂಡೆ ಯೋಜನೆ ಮೂಲಕ 65 ಕೆರೆಗಳಿಗೆ ನೀರು ತುಂಬಿಸಲು 900 ಕೋಟಿ ಹಣದ ಅಗತ್ಯವಿದೆ. ಒಂದೇ ವರ್ಷದಲ್ಲಿ ಅದನ್ನು ವಿನಿಯೋಗಿಸಿ ಕೆರೆಗಳಿಗೆ ನೀರು ತುಂಬಿಸಬಹುದಿತ್ತು. ಆದ್ರೆ ಇನ್ನೂ ಆಶ್ವಾಸನೆಗಳನ್ನೇ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ನಾಯಕರು ವಾಮಮಾರ್ಗದಿಂದ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದರು. ನಾನೇನು ಮುಖ್ಯಮಂತ್ರಿ ಆಗಬೇಕೆಂದಿರಲಿಲ್ಲ. ನನ್ನ ಸರಕಾರದ ಅವಧಿಯಲ್ಲಿ ಸಾಲ ಮನ್ನಾ ಮಾಡಿದೆ ಎಂದು ತಿಳಿಸಿದರು.