ತುಮಕೂರು: ಹಿಂದಿ ರಾಷ್ಟ್ರೀಯ ಭಾಷೆ ಕುರಿತು ಹೇಳಿಕೆ ನೀಡುವ ಮೂಲಕ ಸಮಾಜದ ಸಾಮರಸ್ಯ ಕದಡಿದಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ತುಮಕೂರು ತಾಲೂಕು ಗೂಳೂರು ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಡೀ ದೇಶವು ಒಕ್ಕೂಟ ವ್ಯವಸ್ಥೆ ಆಧಾರದ ಮೇಲೆ ರಚನೆಯಾಗಿದೆ. ರಾಜ್ಯಗಳು ಆಯಾ ಭಾಷಾ ಪರಿಧಿಯಲ್ಲಿವೆ. ಭಾಷಾ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಬೇಕಿದೆ ಎಂದರು.
'ರಾಷ್ಟ್ರೀಯ ಭಾಷೆ ಕುರಿತು ಪದೇ ಪದೇ ಹೇಳಿಕೆ ನೀಡಿದರೆ ಸಾಮರಸ್ಯಕ್ಕೆ ಧಕ್ಕೆ' - Kiccha Sudeep hindi language statement
ಸುದೀಪ್ ಹಾಗೂ ಅಜಯ್ ದೇವಗನ್ ನಡುವೆ ನಡೆದ ವಿಷಯ ಸಂಬಂಧ ನಿನ್ನೆಯೇ ನಾನು ಟ್ವೀಟ್ ಮಾಡಿದ್ದೇನೆ. ಈ ವಿಷಯವನ್ನು ಪದೇ ಪದೇ ಕೆದಕಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದು ಬೇಡ ಎಂದು ಹೆಚ್ಡಿಕೆ ಹೇಳಿದ್ದಾರೆ.
ರಾಷ್ಟ್ರೀಯ ಭಾಷೆ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ
ಸುದೀಪ್ ಹಾಗೂ ಅಜಯ್ ದೇವಗನ್ ನಡುವೆ ನಡೆದ ವಿಷಯ ಸಂಬಂಧ ನಿನ್ನೆಯೇ ನಾನು ಟ್ವೀಟ್ ಮಾಡಿದ್ದೇನೆ. ಈ ವಿಷಯವನ್ನು ಪದೇ ಪದೇ ಕೆದಕಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದು ಬೇಡ. ಈ ವಿಷಯವನ್ನು ಮತ್ತೆ ಮತ್ತೇ ಚರ್ಚೆ ಮಾಡಿದರೆ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತಂದಂತೆ ಎಂಬುದು ನನ್ನ ಅಭಿಪ್ರಾಯ ಎಂದರು.
ಇದನ್ನೂ ಓದಿ: ಬೆಂಗಳೂರಿನವರೆಗೆ ತನಿಖೆ ನಡೆದರೆ ಪಿಎಸ್ಐ ಅಕ್ರಮದಲ್ಲಿ ಬಿಜೆಪಿ ಪಾಲು ಬಯಲಿಗೆ ಬರಲಿದೆ: ಪ್ರಿಯಾಂಕ್ ಖರ್ಗೆ