ಕರ್ನಾಟಕ

karnataka

ETV Bharat / state

ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಉಪಮುಖ್ಯಮಂತ್ರಿ ನಡುವೆ ಒಕ್ಕಲಿಗ ನಾಯಕತ್ವದ ಕುರಿತು ಜುಗಲ್ಬಂದಿ. - ಅಶ್ವತ್ ನಾರಾಯಣ್

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದಲ್ಲಿ ಇಂದು ನಡೆದ ಆದಿಚುಂಚನಗಿರಿ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರ ನಡುವೆ ಒಕ್ಕಲಿಗ ನಾಯಕತ್ವದ ವಿಷಯಕ್ಕೆ ಸಂಬಂಧಪಟ್ಟಂತೆ ಜುಗಲ್ಬಂದಿ ನಡೆಯಿತು.

ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಉಪಮುಖ್ಯಮಂತ್ರಿ ನಡುವೆ ಒಕ್ಕಲಿಗ ನಾಯಕತ್ವದ ಕುರಿತು ಜುಗಲ್ಬಂದಿ

By

Published : Sep 10, 2019, 4:58 AM IST

ತುಮಕೂರು;ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದಲ್ಲಿ ದ ನಡೆದ ಆದಿಚುಂಚನಗಿರಿ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರ ನಡುವೆ ಒಕ್ಕಲಿಗ ನಾಯಕತ್ವದ ವಿಷಯಕ್ಕೆ ಸಂಬಂಧಪಟ್ಟಂತೆ ಜುಗಲ್ಬಂದಿ ನಡೆಯಿತು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿದ್ದಾರೆ
ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ನಾಯಕ ಎಂಬುವವನು ಸಮಾಜದ ಏಳಿಗೆ ಗೋಸ್ಕರ ತನ್ನ ಸರ್ವಸ್ವವನ್ನು ಅರ್ಪಿಸುತ್ತಾನೆ. ನಮ್ಮ ಕನಸನ್ನು ನನಸು ಮಾಡಲು ನಮ್ಮ ಜೊತೆ ಇರುತ್ತಾನೆ ಎಂದು ಜನ ನಂಬಿರುತ್ತಾರೆ. ತ್ಯಾಗ ಬಲಿದಾನ ಮಾಡುತ್ತಾನೆ ಎಂಬ ವಿಶ್ವಾಸ ಜನರಲ್ಲಿರುತ್ತದೆ. ಅದನ್ನೆಲ್ಲಾ ನಾವು ಅರಿತು ಒಬ್ಬ ನಾಯಕ ಮೈಮರೆಯುವಂತಹ ಕೆಲಸ ಮಾಡಬಾರದು. ಸಮಾಜಕ್ಕಾಗಿ ತನ್ನ ಇಡೀ ಬದುಕನ್ನು ಅರ್ಪಿಸಿಕೊಂಡವರು ಮಾತ್ರ ನಾಯಕನಾಗಿ ರೂಪುಗೊಳ್ಳುತ್ತಾನೆ ಎಂದು ಹೇಳಿದರು.
ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಈ ಒಕ್ಕಲಿಗ ಸಮಾಜವನ್ನೇ ದ್ವೇಷಿಸುವಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಆದರೆ ನಾನು ಈ ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ಹಲವರು ಗೌಡರ ಗೌಡ ದೇವೇಗೌಡ ಎಂದು ಜೈ ಕಾರಗಳನ್ನು ಕೂಗಿದ್ದೀರಿ, ನಿಮ್ಮ ಪ್ರೀತಿಗೆ ನಾನು ಆಭಾರಿ ಎಂದರು.

ನಂತರದಲ್ಲಿ ಮಾತನಾಡಿದ ಅವರು, ದೇವೇಗೌಡರು ಚುನಾವಣೆಯಲ್ಲಿ ಗೆಲ್ಲಲಿ ಸೋಲಲಿ ಅವರನ್ನು ನಿಮ್ಮ ನಾಯಕನಂತೆ ಒಪ್ಪಿಕೊಂಡಿದ್ದೀರಿ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣಗೆ ಟಾಂಗ್ ನೀಡಿದರು.


ABOUT THE AUTHOR

...view details