ತುಮಕೂರು:ಶ್ರೀಗಂಧ ಮರ ಕಳ್ಳತನ ಮಾಡಲು ಬಂದು ಸಿಕ್ಕಿಬಿದ್ದಿರುವ ಕಳ್ಳರನ್ನು ಬಂಧಿಸುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮನಬಂದಂತೆ ಬೂಟುಕಾಲಿನಿಂದ ಒದ್ದಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಹೋಬಳಿ ಹರಗಲದೇವಿ ಗುಡ್ಡದಲ್ಲಿ ನಡೆದಿದೆ.
ಕಡಬ ಹೋಬಳಿ ಹರಗಲದೇವಿ ಗುಡ್ಡದ ಸರ್ವೇ ನಂ.1 ರ 1500 ಎಕರೆ ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶದಲ್ಲಿ ತಮಿಳುನಾಡು ಮೂಲದ 12 ಜನ ಮರಗಳ್ಳರ ತಂಡ ಬಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು.