ತುಮಕೂರು:ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಕರಡಿಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದ್ದು, ಇದರ ಕಾಟಕ್ಕೆ ಬೇಸತ್ತಿದ್ದ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾದ್ದಲ್ ತಾಂಡಾದ ಜನ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಬೋನಿಗೆ ಬಿತ್ತು ಕರಡಿ: ನಿಟ್ಟುಸಿರು ಬಿಟ್ಟ ತಾಂಡಾ ಜನ - bear catch by forest depertment in tumkur
ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಕರಡಿಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದ್ದು, ಇದರ ಕಾಟಕ್ಕೆ ಬೇಸತ್ತಿದ್ದ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾದ್ದಲ್ ತಾಂಡಾದ ಜನ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಅರಣ್ಯ ಇಲಾಖೆಯ ಬೋನಿಗೆ ಸೆರೆಯಾಯ್ತು ಕರಡಿ...ನಿಟ್ಟಿಸಿರು ಬಿಟ್ರು ತಾಂಡ್ಯ ಜನ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದ ತೋಟವೊಂದರಲ್ಲಿ ಇಟ್ಟಿದ್ದ ಬೋನಿಗೆ ಕರಡಿ ಬಿದ್ದಿದೆ. ಬರಕನಹಾಲ್ ತಾಂಡಾದ ನಿವಾಸಿಯಾದ ಗೋಪ್ಯಾ ನಾಯ್ಕ ಎಂಬುವರ ತೋಟದಲ್ಲಿ ಬೋನು ಇಡಲಾಗಿತ್ತು.
ಹಲವು ದಿನಗಳಿಂದ ಗೋಪ್ಯಾ ನಾಯ್ಕ ಎಂಬುವರ ತೋಟದ ಸುತ್ತಮುತ್ತಲು ಕರಡಿ ಓಡಾಡುತ್ತಿತ್ತು. ಹಲವು ಬಾರಿ ಜನರ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಕರಡಿ ಬೋನಿಗೆ ಬಿದ್ದ ಹಿನ್ನೆಲೆ ಜನ ನಿಟ್ಟುಸಿರು ಬಿಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಯನ್ನು ವಶಕ್ಕೆ ಪಡೆದಿದ್ದಾರೆ.