ಕರ್ನಾಟಕ

karnataka

ETV Bharat / state

ವೇದಕ್ಕೆ, ಶಾಸ್ತ್ರಕ್ಕೆ ಮಣಿಯದವರು ಜಾನಪದ ಹಾಡಿಗೆ ಮಣಿಯುತ್ತಾರೆ : ವಿದ್ವಾಂಸ ಪಾವಗಡ ಸಣ್ಣ ನಾಗಪ್ಪ - ತುಮಕೂರು ವಿಶ್ವವಿದ್ಯಾಲಯ

ಜಾನಪದ ಮತ್ತು ಜನಸಂಸ್ಕೃತಿ ಇವೆರಡು ಪದಗಳು ಬಹಳ ಮುಖ್ಯವಾದವು. ಜಾನಪದ ಎಂಬುದರಲ್ಲಿ ಜನ ಸಂಸ್ಕೃತಿ ಇದೆ ಎಂದು ಜಾನಪದ ವಿದ್ವಾಂಸ ಪಾವಗಡ ಸಣ್ಣ ನಾಗಪ್ಪ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ 'ಜಾನಪದ-ಶ್ರಮ ಜೀವನದ ಪ್ರತಿಬಿಂಬ' ಎಂಬ ವಿಚಾರ ಸಂಕಿರಣ

By

Published : Mar 21, 2019, 1:16 AM IST

ತುಮಕೂರು: ಜಾನಪದವೇ ಜನಪದರಿಗೆ ಜೀವನದ ಕಾವ್ಯವಾಗಿತ್ತು, ವೇದಕ್ಕೆ, ಶಾಸ್ತ್ರಕ್ಕೆ ಮಣಿಯದವರು, ಜಾನಪದ ಹಾಡಿಗೆ ಮಣಿಯುತ್ತಾರೆ, ಎಂದು ವಿದ್ವಾಂಸ ಪಾವಗಡ ಸಣ್ಣ ನಾಗಪ್ಪ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ 'ಜಾನಪದ-ಶ್ರಮ ಜೀವನದ ಪ್ರತಿಬಿಂಬ' ಎಂಬ ವಿಚಾರ ಸಂಕಿರಣ

ತುಮಕೂರು ವಿಶ್ವವಿದ್ಯಾಲಯದಲ್ಲಿ 'ಜಾನಪದ-ಶ್ರಮ ಜೀವನದ ಪ್ರತಿಬಿಂಬ' ಎಂಬ ವಿಚಾರ ಸಂಕಿರಣವನ್ನು ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವೈ. ಎಸ್. ಸಿದ್ದೇಗೌಡ ಉದ್ಘಾಟಿಸಿ ಮಾತನಾಡಿದರು. ಇಂದು ದೃಶ್ಯ ಮಾಧ್ಯಮದಿಂದ ಜಾನಪದಮರೀಚಿಕೆಯಾಗುತ್ತಿದೆ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂದು ಹೇಳುತ್ತಾರೆ, ಆ ಗಾದೆಗಳನ್ನು ನಮ್ಮ ಜಾನಪದದಲ್ಲಿ ಕಾಣಬಹುದು.ನಮ್ಮ ಜೀವನವನ್ನು ಯಶಸ್ವಿಯಾಗಿ ಕೊಂಡೊಯ್ಯಲು ಜನಪದದ ಮಹತ್ವ ಅರಿತರೆ ಸಾಕು ಎಂದರು.

For All Latest Updates

ABOUT THE AUTHOR

...view details