ಕರ್ನಾಟಕ

karnataka

ETV Bharat / state

ತುಮಕೂರಿನಲ್ಲಿ ಐವರು ಶಿಕ್ಷಕರು ಕೊರೊನಾಗೆ ಬಲಿ: 123 ಮಂದಿಗೆ ಸೋಂಕು ದೃಢ - Tumkur Kovid News 2020

ಅನೇಕ ಶಿಕ್ಷಕರು ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣ ರಜೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ಸೋಂಕಿನ ಪ್ರಾಥಮಿಕ ಸಂಪರ್ಕಿತರಿಗೆ 7 ದಿನ, ಚಿಕಿತ್ಸೆ ಪಡೆಯಲು 14 ದಿನ ರಜೆ ನೀಡಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಡಿಡಿಪಿಐ ನಂಜಯ್ಯ ತಿಳಿಸಿದ್ದಾರೆ.

Tumkur
ತುಮಕೂರು

By

Published : Oct 10, 2020, 1:21 PM IST

ತುಮಕೂರು: ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕಿನಿಂದ ಐವರು ಶಿಕ್ಷಕರು ಮೃತಪಟ್ಟಿದ್ದು, ಇವರೆಲ್ಲರಿಗೂ 50 ವರ್ಷ ಮೀರಿಲ್ಲ ಎಂಬುದು ಆತಂಕ ತರುವ ವಿಷಯವಾಗಿದೆ.

ಜಿಲ್ಲಾ ವಿಭಾಗದಲ್ಲಿ ನಾಲ್ವರು ಶಿಕ್ಷಕರು ಮೃತಪಟ್ಟಿದ್ದು, ಅವರೆಲ್ಲರೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ. ಈ ಮೊದಲು 106 ಮಂದಿ ಶಿಕ್ಷಕರಿಗೆ ಸೋಂಕು ತಗುಲಿತ್ತು. ಇವರಲ್ಲಿ 70 ಮಂದಿ ಗುಣಮುಖರಾಗಿದ್ದಾರೆ. ಇನ್ನು 36 ಮಂದಿ ಹೋಮ್​ ಕ್ವಾರಂಟೈನ್‌ನಲ್ಲಿದ್ದು, ಗುಣಮುಖರಾಗಿರುವ 70 ಶಿಕ್ಷಕರು ಈಗಾಗಲೇ ವಿದ್ಯಾಗಮ ಯೋಜನೆಯ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದಾರೆ.

ವಿದ್ಯಾಗಮ ಶಾಲೆಗಳಿಗೆ ಬರುತ್ತಿದ್ದ ಶಿಕ್ಷಕರ ಪೈಕಿ ಇಬ್ಬರಿಗೆ ಕೊರೊನಾ ಸೋಂಕಿನ ಗುಣಲಕ್ಷಣಗಳು ಕಂಡು ಬಂದಿತ್ತು. ಇದೀಗ ಅವರ ಮಕ್ಕಳು ಕೂಡ ಸಂಪೂರ್ಣ ಗುಣಮುಖರಾಗಿ ಶಾಲೆಗೆ ಹಾಜರಾಗುತ್ತಿದ್ದಾರೆ. ಮಧುಗಿರಿ ಶೈಕ್ಷಣಿಕ ವಿಭಾಗದಲ್ಲಿ ಓರ್ವ ಮುಖ್ಯಶಿಕ್ಷಕ ಸೋಂಕಿನಿಂದ ಮೃತಪಟ್ಟಿದ್ದು, ಇನ್ನು 17 ಮಂದಿ ಸೋಂಕಿಗೆ ಒಳಗಾಗಿದ್ದು ಹೋಮ್ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.
ವಿದ್ಯಾಗಮ ಶಾಲೆಗೆ ಹಾಜರಾಗುತ್ತಿರುವ ಶಿಕ್ಷಕರಿಗೆ ಶಾಲಾ ಆವರಣದಿಂದ ಯಾವುದೇ ರೀತಿಯ ಸೋಂಕು ತಗುಲಿಲ್ಲ. ಇಲ್ಲದಿದ್ದರೆ ಶಾಲೆಗೆ ಹಾಜರಾಗಿದ್ದ ಎಲ್ಲಾ ಮಕ್ಕಳಿಗೂ ಸೋಂಕು ತಗಲುವ ಅವಕಾಶವಿತ್ತು. ಶಿಕ್ಷಕರು ಬೇರೆಡೆ ಓಡಾಡಿದ್ದರಿಂದ ಅವರಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.

ಅನೇಕ ಶಿಕ್ಷಕರು ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣ ರಜೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ಸೋಂಕಿನ ಪ್ರಾಥಮಿಕ ಸಂಪರ್ಕಿತರಿಗೆ 7 ದಿನ, ಚಿಕಿತ್ಸೆ ಪಡೆಯಲು 14 ದಿನ ರಜೆ ನೀಡಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಡಿಡಿಪಿಐ ನಂಜಯ್ಯ ತಿಳಿಸಿದ್ದಾರೆ.

ABOUT THE AUTHOR

...view details