ತುಮಕೂರು: ರಾಜಕೀಯ ದ್ವೇಷದ ಹಿನ್ನೆಲೆ ಅಡಕೆ ಮರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ.
ಅಡಕೆ ಮರಗಳಿಗೆ ಬೆಂಕಿ ಹಚ್ಚಿದ ಆರೋಪ! ಗುಬ್ಬಿ ತಾಲೂಕಿನ ಸಿ.ಎಸ್. ಪುರ ಹೋಬಳಿಯ ನೆಟ್ಟೆಕೆರೆ ಗೇಟ್ ಸಮೀಪದಲ್ಲಿದ್ದ ಮಾಯಣ್ಣ ಗೌಡ ಎಂಬುವರಿಗೆ ಸೇರಿದ ಅಡಕೆ ಗಿಡಗಳು ಬೆಂಕಿಗೆ ಆಹುತಿಯಾಗಿವೆ. ಜಮೀನಿನಲ್ಲಿ ಬೆಳೆಯುತ್ತಿದ್ದ ಅಡಕೆ ಮರ, ಹನಿ ನೀರಾವರಿ ಪೈಪ್ಗಳು, ಪಂಪ್ ಮೋಟಾರ್ ಬೆಂಕಿಯಿಂದ ಹಾನಿಯಾಗಿದೆ.
ಈ ಸುದ್ದಿಯನ್ನೂ ಓದಿ:ಕೋಲಾರ: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ, ಮೂವರು ಸಾವು
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋದ ಹಿನ್ನೆಲೆ ಅಡಕೆ ಮರಗಳನ್ನು ಕಳೆದುಕೊಳ್ಳುವಂತಾಗಿದೆ. ಈ ಕೃತ್ಯ ಎಸಗಿದವರು ಯಾರೆಂದು ಗೊತ್ತಿಲ್ಲ. ಆದ್ರೆ ರಾಜಕೀಯ ದ್ವೇಷದ ಹಿನ್ನೆಲೆ ಕಿಡಿಗೇಡಿಗಳು ಅಡಿಕೆ ಮರಗಳಿಗೆ ಬೆಂಕಿ ಹಚ್ಚಿದ್ದಾರೆ. ಸುಮಾರು 5 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಮಾಯಣ್ಣಗೌಡ ಅಳಲು ತೋಡಿಕೊಂಡಿದ್ದಾರೆ.