ತುಮಕೂರು: ಯುವತಿ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಮಾಜಿ ನಾಮ ನಿರ್ದೇಶಿತ ಸದಸ್ಯ ರಾಜೇಂದ್ರ ಕುಮಾರ್ ವಿರುದ್ಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಮಗಳ ಸಾವಿಗೆ ರಾಜೇಂದ್ರಕುಮಾರ್ ಕಾರಣ ಎಂದು ಆರೋಪಿಸಿ ಯುವತಿಯ ತಾಯಿ ದೂರು ನೀಡಿದ್ದಾರೆ. ರಾಜೇಂದ್ರ ಕುಮಾರ್ ಸೇರಿದಂತೆ ಆತನ ನಾದಿನಿ ಭಾಗ್ಯ, ರಂಜನ್ ಕುಮಾರಿ, ಮನೋಜ್ ಪ್ರಭಾಕರ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಗರದ ಚರ್ಚ್ ಸಮಿತಿ ಸದಸ್ಯನಾದ 55 ವರ್ಷದ ರಾಜೇಂದ್ರ ಕುಮಾರ್ ತುಮಕೂರಿನ 18 ವರ್ಷದ ಯುವತಿಯ ಜತೆ ಅಕ್ರಮ ಸಂಬಂಧ ಬೆಳೆಸಿಕೊಂಡು ಆಕೆಯನ್ನು ಗರ್ಭಿಣಿ ಮಾಡಿದ್ದು, ವೈದ್ಯರ ಸಲಹೆ ಪಡೆಯದೇ ಬಲವಂತವಾಗಿ ಯುವತಿಗೆ ಗರ್ಭಪಾತದ ಮಾತ್ರೆ ನೀಡಿದ ಪರಿಣಾಮ ಅಸ್ವಸ್ಥಳಾಗಿದ್ದ ಯುವತಿ, 4 ತಿಂಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.