ಕರ್ನಾಟಕ

karnataka

ETV Bharat / state

ಕಂಗನಾ ರಾಣಾವತ್ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು - ನಟಿ ಕಂಗನಾ ರಾಣಾವತ್ ವಿರುದ್ಧ ಎಫ್​ಐಆರ್

ಬಾಲಿವುಡ್‌ ನಟಿ ಕಂಗನಾ ರಾಣಾವತ್ ವಿರುದ್ಧ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್​ಐಆರ್) ದಾಖಲಾಗಿದೆ.

actor Kangana Ranawat
ನಟಿ ಕಂಗನಾ ರಾಣಾವತ್ ವಿರುದ್ಧ ಎಫ್​ಐಆರ್ ದಾಖಲು

By

Published : Oct 13, 2020, 2:55 PM IST

ತುಮಕೂರು:ನಟಿ ಕಂಗನಾ ರಾಣಾವತ್ ವಿರುದ್ಧ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ (ಯು/ಎಸ್ -44 , 108, 153, 153ಎ, 504) ಅನ್ವಯ ಪ್ರಕರಣ ದಾಖಲಾಗಿದೆ.

ಎಫ್​ಐಆರ್ ಪ್ರತಿ
ಎಫ್​ಐಆರ್ ಪ್ರತಿ

ಅ.12ರಂದು ತುಮಕೂರಿನ ಪಿಸಿಜೆ ಮತ್ತು ಜೆಎಂಎಫ್​ಸಿ ನ್ಯಾಯಾಲಯದಿಂದ ಬಂದ ಪಿಸಿಆರ್ ಸಂಖ್ಯೆ 452/2020 ರಲ್ಲಿನ ಫಿರಿಯಾದಿ ರಮೇಶ್ ನಾಯ್ಕ ಎಂಬುವರು ಕೊಟ್ಟಿರುವ ದೂರಿನಲ್ಲಿ, ಮುಂಬೈನ ಕಂಗನಾ ರಾಣಾವತ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸಕ್ರಿಯರಾಗಿದ್ದಾರೆ. ಸೆ.21ರಂದು ಅವರ ಟ್ವೀಟ್​​ ಖಾತೆಯಿಂದ ‘ಸಿಎಎ ವಿರುದ್ಧ ತಪ್ಪು ಮಾಹಿತಿ, ಊಹಾಪೋಹಗಳನ್ನು ಹಂಚಿ ದೇಶದಲ್ಲಿ ಗಲಭೆ ಸೃಷ್ಟಿಸಿದ ಜನರೇ ಇಂದು ಕೃಷಿ ಮಸೂದೆಗಳ ಬಗ್ಗೆ ಸಲ್ಲದ ಮಾಹಿತಿಗಳನ್ನು ಹಂಚುತ್ತಿದ್ದಾರೆ. ಇವರು ಭಯೋತ್ಪಾದಕರು' ಎಂದು ಪೋಸ್ಟ್ ಮಾಡಿದ್ದರು.

ಈ ಮೂಲಕ ಕಂಗನಾ, ದುರುದ್ದೇಶದಿಂದ ದೇಶದಲ್ಲಿ ಕೃಷಿ ಸಂಬಂಧಿತ ವಿಧೇಯಕಗಳನ್ನು ವಿರೋಧಿಸುತ್ತಿರುವ ರೈತರನ್ನು ಭಯೋತ್ಪಾದಕರೆಂದು ನಿಂದಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶದಿಂದ ಹಾಗೂ ದೊಂಬಿಗೆ ಪ್ರಚೋದನೆ ನೀಡುವ ಹೇಳಿಕೆಗಳನ್ನು ಅವರು ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದರು.

ABOUT THE AUTHOR

...view details