ತುಮಕೂರು:ಜಿಲ್ಲಾಡಳಿತದ ಸಹಯೋಗದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆಎಸ್ಆರ್ಟಿಸಿ ವತಿಯಿಂದ ನಿರ್ಮಿಸಲಾಗಿರುವ ಕೋವಿಡ್-19 ಮೊಬೈಲ್ ಫೀವರ್ ಕ್ಲಿನಿಕ್ಗೆ ಶಾಸಕ ಜ್ಯೋತಿ ಗಣೇಶ್ ಚಾಲನೆ ನೀಡಿದರು.
ತುಮಕೂರಿಗೂ ಬಂತು ಕೋವಿಡ್-19 ಫೀವರ್ ಕ್ಲಿನಿಕ್ ಬಸ್: ಶಾಸಕ ಜ್ಯೋತಿ ಗಣೇಶ್ ಚಾಲನೆ - MLA jyothi ganesh news
ತುಮಕೂರು ಜಿಲ್ಲಾಡಳಿತದ ವತಿಯಿಂದ ನಿರ್ಮಾಣವಾಗಿರುವ ಕೋವಿಡ್-19 ಮೊಬೈಲ್ ಫೀವರ್ ಕ್ಲಿನಿಕ್ಗೆ ಶಾಸಕ ಜ್ಯೋತಿ ಗಣೇಶ್ ಚಾಲನೆ ನೀಡಿದರು.
ಫೀವರ್ ಕ್ಲಿನಿಕ್ ಬಸ್ಗೆ ಚಾಲನೆ ನೀಡಿದ ಶಾಸಕ ಜ್ಯೋತಿ ಗಣೇಶ್
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಎಸ್ಆರ್ಟಿಸಿ ಬಸ್ಅನ್ನು ಕೊರೊನಾ ಪರೀಕ್ಷೆಗೆ ಬೇಕಾದ ರೀತಿಯಲ್ಲಿ ಸುಸಜ್ಜಿತವಾಗಿ ಮಾರ್ಪಾಡು ಮಾಡಲಾಗಿದೆ. ಕೊರೊನಾ ಶಂಕಿತರನ್ನು ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಇಲ್ಲಿಯವರೆಗೂ ಪರೀಕ್ಷೆ ಮಾಡುವ ಅವಕಾಶವಿತ್ತು. ಆದರೆ ಈಗ ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಇರುವುದರಿಂದ ಅವಶ್ಯಕತೆ ಹೆಚ್ಚು ಇರುವ ಕಡೆ ಹೋಗಿ ಕೊರೊನಾ ಶಂಕಿತರನ್ನು ಪರೀಕ್ಷೆ ಮಾಡಲಿದೆ ಎಂದು ತಿಳಿಸಿದರು.