ಕರ್ನಾಟಕ

karnataka

ಕ್ರಿಸ್ಮಸ್ ಹಬ್ಬದ ಸಂಭ್ರಮಕ್ಕೆ ಕೊರೋನ ಭೀತಿ

By

Published : Dec 24, 2022, 5:57 AM IST

ಕೊರೋನಾ ಭೀತಿಯಿಂದ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಇದ್ದವರಿಗೆ ನಿರಾಸೆ ತಂದಿದೆ.

Sandesh of CSI Church Father
ಸಿಎಸ್ಐ ಚರ್ಚ್ ಫಾದರ್ ಸಂದೇಶ್​

ತುಮಕೂರು:ಕ್ರಿಶ್ಚಿಯನ್ ಸಮುದಾಯದವರು ಒಂದೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿರೆ ಇನ್ನೊಂದೆಡೆ ಕೊರೋನ ರೋಗದ ಭೀತಿ ಎದುರಾಗಿದೆ.
ತುಮಕೂರಿನ ಚರ್ಚ್​ಗಳಲ್ಲಿ ಈ ಬಾರಿ ಪುನಃ ರೋಗ ಹರಡುವಿಕೆಯ ಸುಳಿವನ್ನು ಸರ್ಕಾರ ನೀಡಿದ್ದು ಮುಂಜಾಗ್ರತೆ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಿರುವಂತಹ ಕ್ರಮಗಳನ್ನು ಪಾಲನೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಸಿಎಸ್ಐ ಚರ್ಚ್ ಫಾದರ್ ಸಂದೇಶ್​ ಹೇಳಿದರು.

ಅದರಲ್ಲೂ ಚರ್ಚ್​ಗೆ ಬರುವಂತಹ ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ಕಡ್ಡಾಯವಾಗಿ ಮಾಸ್ಕ್​ಗಳನ್ನು ಧರಿಸುವಂತೆ ಸೂಚನೆ ನೀಡಲಾಗಿದ್ದು, ಹಾಗೂ ಸುತ್ತಲೂ ಸ್ಯಾನಿಟೈಸರ್ ಬಳಕೆಗೆ ಕೂಡ ನಿರ್ಧರಿಸಲಾಗಿದೆ.

ಕಳೆದ ಮೂರು ವರ್ಷಗಳಿಂದ ವಿಪರೀತ ಕೊರೋನ ಸೋಂಕಿನ ಹರಡುವಿಕೆ ಹಿನ್ನೆಲೆ ಕ್ರಿಸ್ಮಸ್ ಆಚರಣೆಗೆ ಸಾಕಷ್ಟು ಹಿನ್ನಡೆ ಉಂಟಾಗಿತ್ತು. ಆದರೆ ಈ ಬಾರಿ ಆ ರೀತಿಯಾದ ಗೊಂದಲದ ವಾತಾವರಣ ನಿರ್ಮಾಣವಾಗುವುದಿಲ್ಲ ಎಂಬ ವಿಶ್ವಾಸವನ್ನು ಸಿಎಸ್ಐ ಚರ್ಚಿನ ಫಾದರ್ ಸಂದೇಶ ತಿಳಿಸಿದರು.
ಆ ಸಂದರ್ಭದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಚರ್ಚ್​ಗಳಿಗೆ ಬಂದು ಪ್ರಾರ್ಥನೆ ಮಾಡಿದ್ದರು.

ಈ ಬಾರಿ ರೋಗ ಮುಕ್ತ ವಾತಾವರಣವಾಗಿದ್ದರಿಂದ ಅತಿಯಾದ ಸಂಭ್ರಮದಲ್ಲಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಪುನಃ ರೋಗ ಹರಡುವಿಕೆಯ ಭೀತಿ ಎದುರಾಗಿರುವುದು ಕೂಡ ಸ್ವಲ್ಪಮಟ್ಟಿಗೆ ನಿರಾಸೆ ತಂದಿದೆ ಎಂದು ಹೇಳಿದರು.

ಈಗಾಗಲೇ ಕ್ರಿಸ್ಮಸ್ ಆಚರಣೆಗೆ ಪೂರಕವಾಗಿ ಡಿಸೆಂಬರ್ ಒಂದರಿಂದಲೇ ಭಕ್ತರ ಮನೆಗಳಿಗೆ ತೆರಳಿ ಸಾಂತಾ ಕ್ಲಾಸ್ ಮೂಲಕ ಗಿಫ್ಟ್​ಗಳನ್ನು ನೀಡುವುದು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುವುದು ಸೇರಿದಂತೆ ಅನೇಕ ಕ್ರಿಸ್ಮಸ್ ಪೂರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕಳೆದ ಮೂರು ವರ್ಷ ಇಂತಹ ಆಚರಣೆಗಳಿಗೆ ಬ್ರೇಕ್ ಹಾಕಲಾಗಿತ್ತು ಎಂದು ಫಾದರ್ ಹೇಳಿದರು.

ಇದನ್ನೂ ಓದಿ :ಏನಿದು ಬಿಎಫ್ 7 ಕೋವಿಡ್​ ವೆರಿಯಂಟ್? ತೀವ್ರತೆ ಎಷ್ಟು? ಇಲ್ಲಿದೆ ಮಾಹಿತಿ..!

ABOUT THE AUTHOR

...view details