ತುಮಕೂರು: ತೋಟದಲ್ಲಿ ತೆಂಗಿನ ಕಾಯಿ ಕಳವು ಮಾಡಿದ್ದಾನೆ ಎಂಬ ಕಾರಣಕ್ಕೆ ತೋಟದ ಮಾಲೀಕ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಮನಸೋ ಇಚ್ಚೆ ಥಳಿಸಿರೋ ವಿಡಿಯೋ ವೈರಲ್ ಆಗಿದೆ.
ವಿಡಿಯೋ: ಮೂರೇ ಮೂರು ತೆಂಗಿನಕಾಯಿ ಕದ್ದಿದ್ದಕ್ಕೆ ಕಂಬಕ್ಕೆ ಕಟ್ಟಿ ಥಳಿಸಿದ ಮಾಲೀಕ - ಮೂರೇ ಮೂರು ತೆಂಗಿನ ಕಾಯಿ ಕದ್ದಿದ್ದಕ್ಕೆ ಕಂಬಕ್ಕೆ ಕಟ್ಟಿ ಥಳಿಸಿದ ಮಾಲೀಕ ವಿಡಿಯೋ ವೈರಲ್
ತುರುವೇಕೆರೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ತೋಟದಲ್ಲಿ ತೆಂಗಿನಕಾಯಿ ಕಳವು ಮಾಡಿದ್ದಾನೆ ಎಂಬ ಕಾರಣಕ್ಕೆ ತೋಟದ ಮಾಲೀಕ ಕಂಬಕ್ಕೆ ಕಟ್ಟಿ ಮನಸೋ ಇಚ್ಚೆ ಥಳಿಸಿರೋ ವಿಡಿಯೋ ವೈರಲ್ ಆಗಿದೆ.
ತೆಂಗಿನ ಕಾಯಿ ಕದ್ದಿದ್ದಕ್ಕೆ ಕಂಬಕ್ಕೆ ಕಟ್ಟಿ ಥಳಿಸಿದ ಮಾಲೀಕ
ತುರುವೇಕೆರೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ರಾಜು ಎಂಬಾತ ಅದೇ ಗ್ರಾಮದ ಹರೀಶ ಎಂಬ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದಿದ್ದಾನೆ.
ಹರೀಶ ಮಂದ ಬುದ್ದಿಉಳ್ಳವನಾಗಿದ್ದು, ಕಡುಬಡವನಾಗಿದ್ದಾನೆ. ಅಲ್ಲದೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಲಾಗಿದೆ. ಮಾನವೀಯತೆ ಮರೆತು ನಡೆದುಕೊಂಡಿರೋ ರಾಜು ಎಂಬಾತನ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Last Updated : Jan 3, 2022, 7:50 PM IST