ಕರ್ನಾಟಕ

karnataka

ETV Bharat / state

ರೈತರಿಂದ ಮನವಿಪತ್ರ ಪಡೆಯಲು ತಡಮಾಡಿದ ಉಪವಿಭಾಗಾಧಿಕಾರಿ - APMC Amendment Act

ಪ್ರತಿಭಟನೆ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದು, ರೈತ ವಿರೋಧಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ..

Farmers protest over agriculture bills in Tumkur
ತುಮಕೂರಲ್ಲಿ ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ

By

Published : Sep 28, 2020, 4:48 PM IST

ತುಮಕೂರು :ಕರ್ನಾಟಕ ಬಂದ್ ಹಿನ್ನೆಲೆ ತಿಪಟೂರು ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಉಪವಿಭಾಗಾಧಿಕಾರಿ ಅವರು ರೈತರ ಮನವಿ ಪತ್ರ ಪಡೆಯಲು ತಡಮಾಡಿದ ಘಟನೆ ನಡೆದಿದೆ.

ತುಮಕೂರಲ್ಲಿ ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ

ಎಸಿ ಕಚೇರಿ ಬಳಿಯೇ ಪ್ರತಿಭಟಿಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ, ಮನವಿ ಪತ್ರ ಪಡೆಯಲು ಹಿಂದುಮುಂದು ನೋಡಿದ್ದಾರೆ. ಬಳಿಕ ಪೊಲೀಸ್ ಅಧಿಕಾರಿ ರೈತರನ್ನೇ ಅವರ ಬಳಿ ಕಳುಹಿಸಿ ಮನವಿ ಪತ್ರ ನೀಡಿದ್ದಾರೆ. ಪ್ರತಿಭಟನೆ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದು, ರೈತ ವಿರೋಧಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details