ಕರ್ನಾಟಕ

karnataka

ETV Bharat / state

ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ತುಮಕೂರಲ್ಲಿ ರೈತ ಸಂಘಟನೆಯಿಂದ ಪ್ರತಿಭಟನೆ

ಉಪನಾಲೆ 24ರ ವ್ಯಾಪ್ತಿಯಲ್ಲಿ ಬರುವ ಗುಬ್ಬಿ ತಾಲೂಕಿನ ಕೊಡಗಿಹಳ್ಳಿ, ಕುನ್ನಾಲ, ಚಂಗಾವಿ ಮತ್ತು ಸಿ‌.ಎಸ್.ಪುರ ಪಂಚಾಯತ್​ ವ್ಯಾಪ್ತಿಯ ಹಳ್ಳಿಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ

By

Published : Sep 3, 2019, 7:18 PM IST

ತುಮಕೂರು: ಉಪನಾಲೆ 24ರ ವ್ಯಾಪ್ತಿಯಲ್ಲಿ ಬರುವ ಗುಬ್ಬಿ ತಾಲೂಕಿನ ಕೊಡಗೀಹಳ್ಳಿ, ಕುನ್ನಾಲ, ಚಂಗಾವಿ ಮತ್ತು ಸಿ‌.ಎಸ್.ಪುರ ಗ್ರಾಮ ಪಂಚಾಯತ್​ ವ್ಯಾಪ್ತಿಯ ಹಳ್ಳಿಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರು ತುಂಬಿದ್ದರೂ, ತುಮಕೂರು ಜಿಲ್ಲೆಗೆ ನೀರನ್ನು ಹರಿಸುವ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಕೊಡಗಿಹಳ್ಳಿ, ಚಂಗಾವಿ, ಕುನ್ನಾಲ, ಹಿಂಡಿಸಿಗೆರೆ ಭಾಗದ ರೈತರಿಗೆ ನೀರು ಹರಿದಿಲ್ಲ. ಉಪನಾಲೆ 24ರ ನಾಲೆಗೆ ನೀರನ್ನು ಹರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ರೈತ ಮುಖಂಡರು ಹೇಳಿದ್ರು.

ಹಾಗಾಗಿ ಸಂಸದರು, ಶಾಸಕರು, ಅಧಿಕಾರಿಗಳು ರೈತರ ಮೇಲೆ ಕಾಳಜಿ ಇದ್ದರೆ ಮೊದಲು ನಾಲೆಯನ್ನು ಅಗಲೀಕರಣ ಮಾಡಿ, ನೀರಿನ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಕೆರೆಗಳಿಗೆ ಪ್ರಾಮಾಣಿಕವಾಗಿ ನೀರು ಹರಿಸಲು ಪ್ರಯತ್ನಿಸಿ ರೈತ ಮುಖಂಡರು ಆಗ್ರಹಿಸಿದ್ದಾರೆ.

ABOUT THE AUTHOR

...view details