ಕರ್ನಾಟಕ

karnataka

ETV Bharat / state

ಮೋದಿ ಕಾರ್ಯಕ್ರಮಕ್ಕೆ ಹಸಿರು ಶಾಲು ಧರಿಸಿ ಬರದಂತೆ ಸೂಚನೆ, ರೈತರ ಅಸಮಾಧಾನ - farmers are instructed to not wear green shall

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವ ರೈತರು ಹಸಿರು ಶಾಲು ಧರಿಸಬಾರದು ಎಂದು ಅಧಿಕಾರಿಗಳು ಸೂಚಿಸಿರುವುದು ಖಂಡನೀಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದ್ರು.

Farmers are instructed not to wear green shall to Modi function
ಮೋದಿ ಕಾರ್ಯಕ್ರಮಕ್ಕೆ ಹಸಿರು ಶಾಲು ಹಾಕಿಕೊಂಡು ಬರದಂತೆ ರೈತರಿಗೆ ಸೂಚನೆ.....ಆಕ್ರೋಶ

By

Published : Jan 2, 2020, 12:56 PM IST

ತುಮಕೂರು:ನಗರದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವ ರೈತರು ಹಸಿರು ಶಾಲು ಧರಿಸದಂತೆ ಅಧಿಕಾರಿಗಳು ಸೂಚಿಸಿರುವುದು ಖಂಡನೀಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದ್ರು.

ಮೋದಿ ಕಾರ್ಯಕ್ರಮಕ್ಕೆ ಹಸಿರು ಶಾಲು ಹಾಕಿಕೊಂಡು ಬರದಂತೆ ರೈತರಿಗೆ ಸೂಚಿಸಿರುವುದಕ್ಕೆ ಖಂಡನೆ

ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತಸಂಘದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಕಾರ್ಯಕ್ರಮಕ್ಕೆ ಬರುವಾಗ ಹಸಿರು ಶಾಲು ಧರಿಸದಂತೆ ಸೂಚನೆ ನೀಡುತ್ತಿದ್ದಾರೆ ಎಂದು ಅವರು ದೂರಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಸಿರುಶಾಲು ರೈತರ ಸ್ವಾಭಿಮಾನದ ಸಂಕೇತವಾಗಿದೆ. ಆದರೆ, ಅದನ್ನೇ ಕಾರ್ಯಕ್ರಮಕ್ಕೆ ಬರುವವರು ಧರಿಸದಂತೆ ಸೂಚಿಸಿರುವುದು ಖಂಡನಾರ್ಹ ಎಂದು ಹೇಳಿದ್ರು.

ABOUT THE AUTHOR

...view details