ತುಮಕೂರು: ಇಲ್ಲಿನ ವ್ಯಕ್ತಿಯೊಬ್ಬರು ಕಾಣೆಯಾಗಿರುವ ತಮ್ಮ ಆಫ್ರಿಕನ್ ಗ್ರೇ ಎಂಬ ಗಿಣಿಯ ಸುಳಿವು ಕೊಟ್ಟವರಿಗೆ ಬರೋಬ್ಬರಿ 50,000 ರೂ. ನಗದು ಬಹುಮಾನ ಘೋಷಿಸಿದ್ದಾರೆ. ರುಸ್ತುಮಾ ಎಂಬ ಹೆಸರಿನ ಗಿಣಿ ಕಾಣೆಯಾಗಿದ್ದು, ಎರಡೂವರೆ ವರ್ಷಗಳಿಂದ ಪ್ರೀತಿಯಿಂದ ಎರಡು ಗಿಣಿಗಳನ್ನು ಮನೆಯಲ್ಲಿ ಸಾಕಿದ್ದರು.
ತುಮಕೂರು: ಕಳೆದು ಹೋಗಿರೋ ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ಘೋಷಿಸಿದ ಕುಟುಂಬ - ತುಮಕೂರಿನಲ್ಲಿ ಕಳೆದುಹೋದ ಗಿಣಿ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಿದ ಕುಟುಂಬ
ತುಮಕೂರಿನ ಜಯನಗರ ಬಡಾವಣೆಯಲ್ಲಿ ವಾಸವಿರುವ ಕುಟುಂಬ ಪ್ರತಿ ವರ್ಷ ಎರಡು ಗಿಣಿಗಳ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುತ್ತಿತ್ತು. ಇದೀಗ ಅವುಗಳಲ್ಲಿ ಒಂದು ಗಿಣಿ ಕಾಣೆಯಾಗಿದ್ದು, ಹಗಲು ರಾತ್ರಿ ಎನ್ನದೇ ಸುತ್ತಮುತ್ತಲ ಬಡಾವಣೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಗಿಳಿ ಮಾಲೀಕರು
ತುಮಕೂರಿನ ಜಯನಗರ ಬಡಾವಣೆಯಲ್ಲಿ ವಾಸವಿರುವ ಕುಟುಂಬ ಪ್ರತಿ ವರ್ಷ ಎರಡು ಗಿಣಿಗಳ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುತ್ತಿತ್ತು. ಇದೀಗ ಅವುಗಳಲ್ಲಿ ಒಂದು ಗಿಣಿ ಕಾಣೆಯಾಗಿದ್ದು, ಹಗಲು ರಾತ್ರಿ ಎನ್ನದೇ ಸುತ್ತಮುತ್ತಲ ಬಡಾವಣೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ ನಗರದೆಲ್ಲೆಡೆ ಬ್ಯಾನರ್ ಗಳನ್ನು ಕಟ್ಟಿ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.