ತುಮಕೂರು:ಒಂದು ಎಕರೆ 20 ಗುಂಟೆ ಜಾಗದಲ್ಲಿ ನಡೆಯುತ್ತಿರುವ ಉರ್ದು ಶಾಲೆ ಮತ್ತು ಈದ್ಗಾ ಮೈದಾನವನ್ನು ಖಾಸಗಿ ವ್ಯಕ್ತಿ ತನ್ನದು ಎಂದು ಸುಳ್ಳು ಪಹಣಿ, ಖಾತೆ ತೋರಿಸುತ್ತಿರುವುದರಿಂದ ಶಾಲೆಯನ್ನು ಉಳಿಸಿ ಎಂದು ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ನಾಗೇನಹಳ್ಳಿಯಲ್ಲಿ ನಡೆದಿದೆ.
ಸರ್ಕಾರಿ ಶಾಲೆಯ ಜಾಗಕ್ಕೆ ಸುಳ್ಳು ದಾಖಲೆ, ತರಗತಿ ನಡೆಸಲು ತೊಂದರೆ: ಮಕ್ಕಳಿಂದ ಪ್ರತಿಭಟನೆ - tumukur
ಒಂದು ಎಕರೆ 20 ಗುಂಟೆ ಜಾಗದಲ್ಲಿ ನಡೆಯುತ್ತಿರುವ ಉರ್ದು ಶಾಲೆ ಮತ್ತು ಈದ್ಗಾ ಮೈದಾನವನ್ನು ಖಾಸಗಿ ವ್ಯಕ್ತಿ ತನ್ನದು ಎಂದು ಸುಳ್ಳು ಪಹಣಿ, ಖಾತೆ ತೋರಿಸುತ್ತಿರುವುದರಿಂದ ಶಾಲೆಯನ್ನು ಉಳಿಸಿ ಎಂದು ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ತುಮಕೂರು ತಾಲೂಕು ಹೆಬ್ಬೂರು ಹೋಬಳಿಯ ನಾಗೇನಹಳ್ಳಿ ಗ್ರಾಮದ ಸರ್ವೆ ನಂಬರ್ 56ರಲ್ಲಿ 1924ರಿಂದ ನಡೆಯುತ್ತಿರುವ ಉರ್ದು ಶಾಲೆ ಮತ್ತು ಈದ್ಗಾ ಮೈದಾನ ಜಾಗವನ್ನು ತಮ್ಮದೆಂದು ಗೌಸ್ಪೀರ್ ಎಂಬುವರು ಹೇಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಆತಂಕವನ್ನುಂಟು ಮಾಡಿದೆ. ಸ್ವಾತಂತ್ಯ ಪೂರ್ವದಲ್ಲಿ ಆರಂಭವಾದ ಈ ಸರ್ಕಾರಿ ಶಾಲೆ ಈಗಲೂ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಬಂದಿದೆ. 1963ರಲ್ಲಿ ವಕ್ಫ್ ಬೋರ್ಡ್ಗೆ ನೀಡಲಾಯಿತು. ಇದರ ಜೊತೆಗೆ ಕಳೆದ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಶಾಲೆಯಲ್ಲಿಯೇ ಒಂದು ದಿನ ಕಳೆದಿದ್ದರು. ಈಗಿನ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೊಸದಾಗಿ ಕಟ್ಟಡ ಕಟ್ಟಲು ನೀಡಿದ ಆದೇಶದ ಮೇರೆಗೆ ನೂತನ ಕಟ್ಟಡದ ಕಾಮಗಾರಿಯೂ ನಡೆಯುತ್ತಿದೆ. ಆದರೆ ಈಗ ಶಾಲೆಯ ಆವರಣ ತನ್ನದು ಎಂದು ಗೌಸ್ಪೀರ್ ತಕರಾರು ತೆಗೆದು, ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಲಾಗಿದೆ. ಇದು ವಕ್ಫ್ ಬೋರ್ಡ್ಗೆ ಸೇರಿದ ಜಾಗ ಎಂದು ಗ್ರಾಮಸ್ಥ ವಸಿಂ ತಿಳಿಸಿದ್ದಾರೆ.
ಈ ಶಾಲೆಗೆ ಸ್ವಾತಂತ್ರ್ಯ ಪೂರ್ವದಿಂದಲೂ ಇತಿಹಾಸವಿದ್ದು, ಇಲ್ಲಿನ ಶಾಲೆ ಮತ್ತು ಈದ್ಗಾ ಮೈದಾನ ಸರ್ಕಾರಕ್ಕೆ ಸೇರಿದ್ದು. ಕಳೆದ ಒಂದು ವರ್ಷದ ಹಿಂದೆ ಸುಳ್ಳು ಪಹಣಿ, ಖಾತೆಗಳನ್ನು ಸೃಷ್ಟಿ ಮಾಡಿಸಿ, ಶಾಲಾ ವಿದ್ಯಾರ್ಥಿಗಳಿಗೆ ನೂತನ ಕಟ್ಟಡ ನಿರ್ಮಾಣ ಮಾಡಲು ಬಿಡುತ್ತಿಲ್ಲ. ಮಕ್ಕಳ ಶಿಕ್ಷಣ ವ್ಯವಸ್ಥಿತವಾಗಿ ನಡೆಯಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಾವಿದ್ ಇಕ್ಬಾಲ್ ಮನವಿ ಮಾಡಿಕೊಂಡಿದ್ದಾರೆ.