ತುಮಕೂರು: ಜಿಲ್ಲೆಯಲ್ಲಿ ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಪಡೆದು ಸದ್ದಿಲ್ಲದೇ ಒಟ್ಟು100 ನಕಲಿ ಕ್ಲಿನಿಕ್ಗಳು ಆರಂಭಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ದಿನಸಿ ಅಂಗಡಿಗೆ ಪರ್ಮಿಟ್ ಪಡೆದು ನಡೆಯುತ್ತಿವೆ ನಕಲಿ ಕ್ಲಿನಿಕ್ಗಳು... ಫೇಕ್ ಡಾಕ್ಟರ್ ಬಗ್ಗೆ ಇರಲಿ ಎಚ್ಚರ - ತುಮಕೂರಿನಲ್ಲಿ ನಕಲಿ ಕ್ಲಿನಿಕ್ಗಳು ಆರಂಭ
ತುಮಕೂರಿನಲ್ಲಿ ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ಪಡೆದು ಸದ್ದಿಲ್ಲದೇ ಒಟ್ಟು100 ನಕಲಿ ಕ್ಲಿನಿಕ್ಗಳು ಆರಂಭಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ

ಈಗಾಲೇ ಒಟ್ಟು100 ನಕಲಿ ಕ್ಲಿನಿಕ್ಗಳಿದ್ದು, ಮುಖ್ಯವಾಗಿ ಇಂತಹ ಕ್ಲಿನಿಕ್ ಗಳನ್ನು ಆರಂಭಿಸುವ ಸಂದರ್ಭದಲ್ಲಿ ಟ್ರೇಡ್ ಲೈಸನ್ಸ್ ಪಡೆಯುವ ಅಗತ್ಯವಿದೆ. ಸಂಬಂಧಪಟ್ಟಂತಹ ಮಹಾನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ವೈದ್ಯರುಗಳಿಗೆ ಕ್ಲಿನಿಕ್ ಆರಂಭಿಸಲು ಲೈಸೆನ್ಸ್ ನೀಡುತ್ತವೆ. ಈ ವೇಳೆ ವೈದ್ಯರು ತಮ್ಮ ಎಂಬಿಬಿಎಸ್ ಪದವಿಯ ಸರ್ಟಿಫಿಕೇಟ್ಗಳನ್ನು ಹಾಜರುಪಡಿಸಿ ಕ್ಲಿನಿಕ್ ಆರಂಭಿಸಲು ಅನುಮತಿ ಪಡೆಯುತ್ತಾರೆ. ಆದರೆ ನಕಲಿ ಡಾಕ್ಟರ್ ಗಳು ಮಾತ್ರ ಸಂಬಂಧಪಟ್ಟಂತಹ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವ ಸಂದರ್ಭದಲ್ಲಿ ದಿನಸಿ ಅಂಗಡಿ ಆರಂಭಿಸುವ ಸಲುವಾಗಿ ಲೈಸೆನ್ಸ್ ಪಡೆದಿರುತ್ತಾರೆ. ಆನಂತರದಲ್ಲಿ ಸ್ಥಳೀಯ ಸಂಸ್ಥೆ ಅಧಿಕಾರಿಗಳಾಗಲಿ ಯಾರು ಕೂಡ ಸ್ಥಳಕ್ಕೆ ತೆರಳಿ ಅಲ್ಲಿ ಯಾವ ರೀತಿಯಾದ ವಹಿವಾಟು ನಡೆಯುತ್ತಿದೆ ಎಂಬುದನ್ನು ಪರಿಶೀಲಿಸುವುದಿಲ್ಲ. ಹೀಗಾಗಿ ನಕಲಿ ಡಾಕ್ಟರ್ಗಳಿಗೆ ನಕಲಿ ಕ್ಲೀನಿಕ್ ಗಳನ್ನು ಆರಂಭಿಸಲು ಇದೊಂದು ವರದಾನವಾಗಿ ಪರಿಣಮಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಚಂದ್ರಿಕಾ ಡ್ರಗ್ ಕಂಟ್ರೋಲರ್ ಅವರುಗಳು ಅಪಾರ ಪ್ರಮಾಣದ ಔಷಧಿ ಸರಬರಾಜು ಮಾಡುವಂತಹ ಏಜೆನ್ಸಿಗಳು ಹಾಗೂ ಮೆಡಿಕಲ್ ಸ್ಟೋರ್ ಗಳನ್ನು ಪರಿಶೀಲಿಸಬೇಕು. ಹೀಗಾದಾಗ ಮಾತ್ರ ನಕಲಿಕ್ಲಿನಿಕ್ಗಳ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ.