ಕರ್ನಾಟಕ

karnataka

ETV Bharat / state

ಗ್ರಾಮೀಣ ಭಾಗದಲ್ಲೂ ಅಪ್ಪು ಆದರ್ಶ.. ತುಮಕೂರಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಏರಿಕೆ - ಲಯನ್ಸ್​ ಐ ಬ್ಯಾಂಕ್

ನಟ ಪುನೀತ್ ರಾಜ್​​ಕುಮಾರ್​ ಬದುಕಿದ್ದಾಗ ಮಾತ್ರವಲ್ಲ ಅಗಲಿಕೆಯ ಬಳಿಕವೂ ಸಮಾಜಕ್ಕೆ ಕಳಕಳಿಯ ಸಂದೇಶ ಸಾರಿದ್ದರು. ತಮ್ಮ ನೇತ್ರದಾನದ ಮೂಲಕ ಸಾವಿರಾರು ಜನರಿಗೆ ಪ್ರೇರಣೆಯಾದರು. ಹೀಗಾಗಿ ನಗರ ಭಾಗವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ನೇತ್ರದಾನ ಕುರಿತಂತೆ ಜನರಲ್ಲಿ ಅರಿವು ಮೂಡಿದ್ದು, ಕಣ್ಣಿಲ್ಲದವರಿಗೆ ಬೆಳಕಾಗುವ ಕಡೆ ಜನ ಆಸಕ್ತಿ ತೋರುತ್ತಿದ್ದಾರೆ.

eye-donors-number-raised-in-tumkur-after-deceased-of-puneeth-rajkumar
.ತುಮಕೂರಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಏರಿಕೆ

By

Published : Nov 10, 2021, 8:08 AM IST

ತುಮಕೂರು:ನಟ ಪುನೀತ್ ರಾಜ್​ಕುಮಾರ್ ಸಾಮಾಜಿಕ ಕಾರ್ಯಗಳು ಸಾವಿರಾರು ಜನರಿಗೆ ಪ್ರೇರಣೆಯಾಗುತ್ತಿದೆ. ಅಗಲಿದಾಗ ಅವರು ನೇತ್ರದಾನ ಮಾಡಿರುವುದು ಸಹ ಅನೇಕರಿಗೆ ಪ್ರೇರಣೆಯಾಗುತ್ತಿದೆ.

ಇದೀಗ ತುಮಕೂರು ನಗರದಲ್ಲಿ ನೇತ್ರದಾನಕ್ಕೆ ಮುಂದಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಪುನೀತ್ ರಾಜ್​ಕುಮಾರ್ ನಿಧನದ ಬಳಿಕ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಮಂದಿ ನೇತ್ರದಾನ ಮಾಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಈಗಾಗಲೇ 6 ಮಂದಿ ನೇತ್ರದಾನ ಮಾಡಿದ್ದಾರೆ. ವಿವಿಧೆಡೆ ನಾನಾ ಕಾರಣದಿಂದಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರು ಮೃತನ ನೇತ್ರದಾನಕ್ಕೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ತುಮಕೂರಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಏರಿಕೆ

ಪುನೀತ್ ರಾಜಕುಮಾರ್ ಅಗಲಿಕೆಗೂ ಮುನ್ನ ತಿಂಗಳಲ್ಲಿ ಕೇವಲ 2ರಿಂದ 3 ಮಂದಿ ಮಾತ್ರ ನೇತ್ರದಾನ ಮಾಡುತ್ತಿದ್ದರು. ಬಹುತೇಕ ಅವರೆಲ್ಲರು ಉನ್ನತ ಶಿಕ್ಷಣ ಪಡೆದವರು, ಸಾಮಾಜಿಕ ಕಳಕಳಿ ಹೊಂದಿರುವವರು ಇರುತ್ತಿದ್ದರು. ಆದರೆ ಇದೀಗ ನೇತ್ರದಾನ ಮಾಡಿರುವ ವಿಷಯ ಅರಿತ ಗ್ರಾಮೀಣ ಭಾಗದ ಜನತೆ ಸಹ ನೇತ್ರದಾನಕ್ಕೆ ಆಸಕ್ತಿ ತೋರುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಹೇಳಿದ್ದಾರೆ.

ಜನರ ಈ ಆಸಕ್ತಿ ಗಮನಿಸಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅರ್ಜಿಯೊಂದನ್ನು ಇರಿಸಲಾಗಿದ್ದು, ನೇತ್ರದಾನ ಮಾಡಲು ಇಚ್ಛಿಸುವವರು ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಇಲ್ಲಿ ಸಂಗ್ರಹಿಸಲಾಗಿರುವ ಕಣ್ಣುಗಳನ್ನು ಲಯನ್ಸ್​ ಐ ಬ್ಯಾಂಕಿಗೆ ಕಳುಹಿಸಿಕೊಡಲಾಗುವುದು. ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ವೈದ್ಯರು ಸ್ಥಳಕ್ಕೆ ತೆರಳಿ ಕಣ್ಣುಗಳ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಅರಮನೆ ಮೈದಾನದಲ್ಲಿ ಸಾವಿರಾರು ಮಂದಿಗೆ ಅನ್ನದಾನ: ಪುನೀತ್‌ ಬಯಕೆ ಈಡೇರಿತು!

ABOUT THE AUTHOR

...view details