ತುಮಕೂರು: ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಕೆಲವರು ಡಿ.ಕೆ. ಶಿವಕುಮಾರ್ ಅವರನ್ನು ಮುಗಿಸಬೇಕೆಂದು ಪ್ಲಾನ್ ಮಾಡಿದ್ದಾರೆ. ಇದು ಕೇವಲ ಒಕ್ಕಲಿಗ ಸಮುದಾಯವನ್ನು ತುಳಿಯಲು ಮಾಡಿದ ಷಡ್ಯಂತ್ರ ಎಂದು ತುರುವೆಕೆರೆ ಮಾಜಿ ಶಾಸಕ ಕೃಷ್ಣಪ್ಪ ಆರೋಪಿಸಿದ್ದಾರೆ.
ಡಿಕೆಶಿ ಬಂಧನ ಒಕ್ಕಲಿಗರನ್ನು ತುಳಿಯುವ ಷಡ್ಯಂತ್ರ: ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ - DKShivkumar arrest
ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಕೆಲವರು ಡಿ.ಕೆ. ಶಿವಕುಮಾರ್ ಅವರನ್ನು ಮುಗಿಸಬೇಕೆಂದು ಪ್ಲಾನ್ ಮಾಡಿದ್ದಾರೆ. ಇದು ಸಾಧ್ಯವಿಲ್ಲ. ಇದು ಕೇವಲ ಒಕ್ಕಲಿಗ ಸಮುದಾಯವರನ್ನು ತುಳಿಯಲು ಮಾಡಿದ ಷಡ್ಯಂತ್ರ ಎಂದು ತುರುವೆಕೆರೆ ಮಾಜಿ ಶಾಸಕ ಕೃಷ್ಣಪ್ಪ ಆರೋಪಿಸಿದ್ದಾರೆ.
ತುರುವೆಕೆರೆಯಲ್ಲಿ ಮಾತನಾಡಿದ ಅವರು, ಡಿಕೆಶಿ ಅವರಿಗೆ ಶೀಘ್ರದಲ್ಲೇ ಜಾಮೀನು ಸಿಗುವ ವಿಶ್ವಾಸವಿದೆ. ಒಂದು ವೇಳೆ ಜಾಮೀನು ಸಿಕ್ಕರೆ ನಂತರ ಏನೂ ಆಗುವುದಿಲ್ಲ. ಪ್ರಕರಣದ ಮತ್ತೋರ್ವ ಆರೋಪಿಸಿ ಶರ್ಮ ಎಂಬುವರು 8.5 ಕೋಟಿ ರೂ. ಹಣ ತನ್ನದೆಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.
ಒಂದೆಡೆ ಡಿ.ಕೆ. ಶಿವಕುಮಾರ್, ಮತ್ತೊಂದೆಡೆ ಹೆಚ್.ಡಿ.ಕುಮಾರಸ್ವಾಮಿ ಈ ಇಬ್ಬರನ್ನೂ ತುಳಿಯಲು ಸಿಎಂ ಯಡಿಯೂರಪ್ಪ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಗುರಿ ಇಟ್ಟುಕೊಂಡಿದ್ದಾರೆ ಎಂದು ಕೃಷ್ಣಪ್ಪ ಗಂಭೀರ ಆರೋಪ ಮಾಡಿದ್ದಾರೆ.