ಕರ್ನಾಟಕ

karnataka

ETV Bharat / state

ಸ್ವಾಮೀಜಿಯಿಂದ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ವಂಚನೆ ಆರೋಪ - ಮಾಜಿ ಅಧ್ಯಕ್ಷ

ತಿಪಟೂರಿನಲ್ಲಿ ಸ್ವಾಮೀಜಿಯೊಬ್ಬರು ಖಾಲಿ ಸೈಟ್​ಗಳ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮಾರಾಟ ಮಾಡುವ ಮೂಲಕ ಅಮಾಯಕ ಜನರನ್ನು ವಂಚಿಸುತ್ತಿದ್ದಾರೆ ಎಂದು ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಹೆಚ್.ಎಸ್.ದೇವರಾಜ್ ಆರೋಪಿಸಿದರು.

ಮಾಜಿ ಅಧ್ಯಕ್ಷ ದೇವರಾಜ್

By

Published : Aug 1, 2019, 10:23 PM IST

ತುಮಕೂರು: ತಿಪಟೂರು ನಗರದ ಖಾಲಿ ಸೈಟ್​​​ಗಳಿಗೆ ಅಲ್ಲಿನ ಸ್ವಾಮೀಜಿಯೊಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಮಾರಾಟ ಮಾಡುವ ಮೂಲಕ ಅಮಾಯಕ ಜನರನ್ನು ವಂಚಿಸುತ್ತಿದ್ದಾರೆ ಎಂದು ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಹೆಚ್.ಎಸ್.ದೇವರಾಜ್ ಆರೋಪಿಸಿದರು.

ಕಾರಣವಿಲ್ಲದೆ ತನ್ನ ಮೊದಲನೇ ಹೆಂಡತಿಯನ್ನು ಕೊಲೆ ಮಾಡಿದ ವಿಜಯ್ ಕುಮಾರ್ ಪೊಲೀಸರ ಕೈಗೆ ಸಿಕ್ಕಿ ಬೀಳುವ ಮೊದಲೇ ಅಲ್ಲಿಂದ ಓಡಿ ಹೋಗುತ್ತಾನೆ. ಇದರ ನಡುವೆ ಆತನಿಗೆ ಎರಡನೇ ಮದುವೆಯಾಗಿರುತ್ತದೆ. ಎರಡನೇ ಪತ್ನಿ ಅನಾರೋಗ್ಯದ ಕಾರಣ ಸಾಯುವ ಮೊದಲು ತನ್ನ ಆಸ್ತಿಯನ್ನೆಲ್ಲ ತನ್ನ ಸಹೋದರಿ ಹೆಸರಿಗೆ ವಿಲ್ ಬರೆಸಿ ಆಕೆಯು ಮರಣ ಹೊಂದುತ್ತಾಳೆ.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಓರ್ವ ಸ್ವಾಮೀಜಿ ಕಣ್ಣು ಆಕೆಯ ಆಸ್ತಿಯ ಮೇಲೆ ಬೀಳುತ್ತದೆ. ಕೆಲ ಮಧ್ಯವರ್ತಿಗಳ ಸಹಾಯದಿಂದ ಆಸ್ತಿಯನ್ನು ನಾಜೂಕಾಗಿ ಲಪಟಾಯಿಸುವ ತಂತ್ರ ರೂಪಿಸುವ ಮೂಲಕ ಈ ಕೆಲಸವನ್ನು ಪೂರ್ಣಗೊಳಿಸುತ್ತಾರೆ.

ಸ್ವಾಮೀಜಿಯಿಂದ ನಕಲಿ ದಾಖಲೆ ಸೃಷ್ಟಿ ಆರೋಪ

ನಕಲಿ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಖಾಲಿ ಸೈಟ್​​ಗಳನ್ನು ಮಾರಾಟ ಮಾಡುವ ದಂಧೆಗೆ ಇಳಿದು, ನಾಲ್ಕೈದು ಮಂದಿಯಿಂದ ಮುಂಗಡ ಹಣ ಪಡೆದು ಸೈಟ್ ಮಾರಾಟ ಮಾಡಲು ಮುಂದಾಗಿರುತ್ತಾರೆ.

ಒಮ್ಮೆ ನಿವೇಶನದ ಬಗ್ಗೆ ಸಾಕಷ್ಟು ಮಾಹಿತಿ ಪಡೆದು ನಂತರ ಖರೀದಿ ಮಾಡಲು ಮುಂದಾದ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಮೂಲ ದಾಖಲೆಗಳಿಗೆ ಬೇಡಿಕೆ ಇಡುತ್ತಾರೆ ಮೂಲ ದಾಖಲೆಗಳನ್ನು ಒದಗಿಸುವಲ್ಲಿ ಮಧ್ಯವರ್ತಿಗಳು ವಿಫಲರಾಗುತ್ತಾರೆ. ಆಗ ನಿವೇಶನದ ಮೂಲ ಒಡತಿಯ ವಂಶವೃಕ್ಷ ಸೇರಿದಂತೆ ಹಲವು ದಾಖಲೆಗಳನ್ನು ತಿರುಚಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು.ಈ ಬಗ್ಗೆ ಸ್ಪಷ್ಟವಾಗಿ ತನಿಖೆ ನಡೆಸುವ ಮೂಲಕ ವಂಚಕರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details