ತುಮಕೂರು : ನಾನು ಚುನಾವಣೆಯಲ್ಲಿ ಸೋತಾಕ್ಷಣ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂಬುದು ಸುಳ್ಳು. ಇಂತಹ ವದಂತಿಯನ್ನು ಹಬ್ಬಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ, ಕಾಂಗ್ರೆಸ್ ಸೇರುವಂತಹ ದುಸ್ಥಿತಿ ನನಗೆ ಬಂದಿಲ್ಲ. ಇಂತಹ ವದಂತಿಗಳಿಗೆಲ್ಲ ಕಾರ್ಯಕರ್ತರು ಕಿವಿಗೊಡಬಾರದು ಮತ್ತು ಧೃತಿಗೆಡಬಾರದು ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಚಿಕ್ಕನಾಯಕನಹಳ್ಳಿಯಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ನಾನು ನಾಲ್ಕು ದಶಕಗಳಿಂದ ರಾಜಕೀಯ ಜೀವನದಲ್ಲಿದ್ದೇನೆ. ನನ್ನ ಸೋಲಿಗೆ ಯಾರನ್ನೂ ಹೊಣೆ ಮಾಡುವುದಿಲ್ಲ. ಅದು ನನ್ನ ಹಣೆಬರಹ. ಸೋತಾಗ ಒಂದಷ್ಟು ದಿನ ಮನಸ್ಸಿಗೆ ನೋವು ಆಗುವುದು ಸಹಜ ಎಂದರು.