ಕರ್ನಾಟಕ

karnataka

ETV Bharat / state

ಕಂಟೈನ್ಮೆಂಟ್ ಝೋನ್​ಗಳಲ್ಲಿ ಆಹಾರ ಪದಾರ್ಥ ನೀಡುವಾಗ ಎಚ್ಚರ ವಹಿಸಿ: ತಹಶೀಲ್ದಾರ್ - ಗುಬ್ಬಿ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್

ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ದೊಡ್ಡಗುಣಿ ವಿ.ಎಸ್.ಎಸ್.ಎನ್. ವತಿಯಿಂದ ಆಶಾ ಕಾರ್ಯಕರ್ತೆಯರಿಗೆ, ದಾದಿಯರು, 108 ವಾಹನ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.

Tumakuru
ಆಹಾರ ಪದಾರ್ಥಗಳ ಕಿಟ್ ವಿತರಣೆ

By

Published : Jul 17, 2020, 12:17 AM IST

Updated : Jul 17, 2020, 12:32 AM IST

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇನ್ನೂ ಕಂಟೈನ್ಮೆಂಟ್​​ ಝೋನ್​ಗಳ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಹೀಗಾಗಿ ಕಂಟೈನ್ಮೆಂಟ್ ಝೋನ್​ಗಳಲ್ಲಿರುವ ಜನರಿಗೆ ಆಹಾರ ಪದಾರ್ಥಗಳನ್ನು ನೀಡುವ ದಾನಿಗಳು ತಾಲೂಕು ಆಡಳಿತದ ಗಮನಕ್ಕೆ ತಂದು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಗುಬ್ಬಿ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

108 ವಾಹನ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ

ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ದೊಡ್ಡಗುಣಿ ವಿ.ಎಸ್.ಎಸ್.ಎನ್. ವತಿಯಿಂದ ಆಶಾ ಕಾರ್ಯಕರ್ತೆಯರಿಗೆ, ದಾದಿಯರು, 108 ವಾಹನ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸುವ ವೇಳೆ ಮಾತನಾಡಿ, ಕೊರೊನಾದಂತಹ ಸಂಕಷ್ಟ ಸಮಯದಲ್ಲಿ ಕೊರೊನಾ ವಾರಿಯರ್​​ಗಳಾಗಿ ಸೇವೆ ಮಾಡುತ್ತಿರುವಂತಹವರಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಹೇಳಿದರು.

ತಾಲೂಕಿನಲ್ಲಿ 25ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ​ಗಳಿದ್ದು ಕಂಟೈನ್ಮೆಂಟ್ ವಲಯಗಳು ಸಹ ಇದ್ದು ಅಲ್ಲಿನ ಜನರಿಗೆ ಅಗತ್ಯವಾದ ಸೌಲಭ್ಯ ನೀಡಲಾಗುತ್ತಿದೆ. ಪಾಸಿಟಿವ್ ಬಂದಿದ್ದ ವ್ಯಕ್ತಿಗಳು ಸಹ ಈಗಾಗಲೇ ಗುಣಮುಖರಾಗಿದ್ದಾರೆ. ಸಾರ್ವಜನಿಕರು ಅನಗತ್ಯವಾಗಿ ಓಡಾಟ ಮಾಡಬಾರದು. ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಿ ಎಂದು ತಿಳಿಸಿದರು.

ಇನ್ನು ಕಾರ್ಯಕ್ರಮದಲ್ಲಿ ವಿ.ಎಸ್.ಎಸ್.ಎನ್​. ಉಪಾಧ್ಯಕ್ಷ ಪರಶಿವ ಮೂರ್ತಿ, ನಿರ್ದೇಶಕರಾದ ರೇಣುಕಾ ಪ್ರಸಾದ್, ಈರಣ್ಣ, ದ್ರಾಕ್ಷಾಯಣಮ್ಮ, ಪಂಚಾಕ್ಷರಯ್ಯ ಮತ್ತಿತರರು ಹಾಜರಿದ್ದರು.

Last Updated : Jul 17, 2020, 12:32 AM IST

ABOUT THE AUTHOR

...view details