ತುಮಕೂರು: ಲಾಕ್ಡೌನ್ ಹಿನ್ನೆಲೆ ಚಮ್ಮಾರ ಕುಟುಂಬದ ನೋವಿನ ಪರಿಸ್ಥಿತಿಯನ್ನು ಬಿತ್ತರಿಸಿದ್ದ ‘ಈಟಿವಿ ಭಾರತ್’ ವರದಿಗೆ ಜಿಲ್ಲಾಡಳಿತ ಸ್ಪಂದಿಸಿದೆ.
ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಇರುವ ಚಮ್ಮಾರ ಮಂಜುನಾಥ್ ಅನೇಕ ದಿನಗಳಿಂದ ವ್ಯಾಪಾರವಿಲ್ಲದೆ ತುತ್ತು ಅನ್ನಕ್ಕೂ ಸಂಕಷ್ಟ ಅನುಭವಿಸುತ್ತಿದ್ದರು. ಅಲ್ಲದೆ ದಾನಿಗಳಿಂದ ಆಹಾರವನ್ನು ಪಡೆದು ಬದುಕು ನಡೆಸುತ್ತಿರುವುದಾಗಿ ಈಟಿವಿ ಭಾರತದೊಂದಿಗೆ ಸಮಸ್ಯೆ ಹೇಳಿಕೊಂಡಿದ್ದರು.