ಕರ್ನಾಟಕ

karnataka

ETV Bharat / state

ಪಾವಗಡ.. ತ್ಯಾಜ್ಯ ವಿಲೇವಾರಿ ವಾಹನಕ್ಕೆ ತಾಪಂ ಇಒ ನರಸಿಂಹ ಮೂರ್ತಿ ಚಾಲನೆ - ಪಾವಗಡದಲ್ಲಿ ಘನ, ದ್ರವ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಚಾಲನೆ

ಪಾವಗಡ ತಾಪಂ ಕಾರ್ಯನಿರ್ವಣಾಧಿಕಾರಿ ನರಸಿಂಹಮೂರ್ತಿ ಅರಸೀಕೆರೆ ಗ್ರಾಮ ಪಂಚಾಯತ್‌ನಲ್ಲಿ ಘನ, ದ್ರವ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿದರು.

Pavagada EO Narasimha Murthy
ಕಾರ್ಯನಿರ್ವಣಾಧಿಕಾರಿ  ನರಸಿಂಹ ಮೂರ್ತಿ

By

Published : Dec 3, 2019, 12:58 PM IST

ತುಮಕೂರು: ಪಾವಗಡ ತಾಲೂಕಿನ ಅರಸೀಕೆರೆ ಗ್ರಾಮ ಪಂಚಾಯತ್‌ನಲ್ಲಿ ಘನ, ದ್ರವ ತ್ಯಾಜ್ಯ ವಿಲೇವಾರಿ ವಾಹನಕ್ಕೆ ತಾಪಂ ಕಾರ್ಯನಿರ್ವಣಾಧಿಕಾರಿ ನರಸಿಂಹಮೂರ್ತಿ ಚಾಲನೆ ನೀಡಿದರು.

ತಾಪಂ ಕಾರ್ಯನಿರ್ವಣಾಧಿಕಾರಿ ನರಸಿಂಹಮೂರ್ತಿ..

ನಂತರ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಘನ ಮತ್ತು ದ್ರವ ತ್ಯಾಜ್ಯ ವಿಂಗಡಣೆ ಮಾಡಲು ಜಾಗೃತಿ ಮೂಡಿಸಿ ಪ್ರತಿ ಮನೆಯಿಂದ ಕಸ ವಿಲೇವಾರಿ ಮಾಡಲಾಗುತ್ತಿದೆ.

ಪ್ರತಿ ಮನೆಗಳಿಂದ ಹಸಿ ಮತ್ತು ಒಣಕಸವನ್ನು ವಿಂಗಡಿಸಿ ಚೀಲ ಅಥವಾ ಬುಟ್ಟಿಗೆ ತುಂಬಿ ಗ್ರಾಮ ಪಂಚಾಯತ್​ ಕಸ ವಿಲೇವಾರಿಗೆ ಬಂದಾಗ ಕಸವನ್ನು ನೀಡಿ, ನಿಮ್ಮ ಮನೆ ನಿಮ್ಮ ಗ್ರಾಮ ಮತ್ತು ಪಂಚಾಯತ್‌ಯನ್ನು ಸ್ವಚ್ಛವಾಗಿಡಲು ಕೈಜೋಡಿಸಿ, ಆರೋಗ್ಯವಾದ ಗ್ರಾಮ ಪಂಚಾಯತ್​ಗಳಾಗಲು ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.

For All Latest Updates

ABOUT THE AUTHOR

...view details