ಕರ್ನಾಟಕ

karnataka

ETV Bharat / state

ತುಮಕೂರು: ಗಣೇಶೋತ್ಸವಕ್ಕೆ ಗೋಮಯ ಗಣಪತಿ ಆಕರ್ಷಣೆ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚೆನ್ನಮಲ್ಲೇನಹಳ್ಳಿಯಲ್ಲಿನ ಸುರಭಿ ಗೋ ಶಾಲೆಯಲ್ಲಿ ಸಗಣಿಯಿಂದ ಗಣೇಶ ಮೂರ್ತಿಗಳು ತಯಾರಿಸಲಾಗಿದೆ. ಈ ಮೂರ್ತಿಗಳು ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಮಾರುಕಟ್ಟೆಗೆ ಬಂದಿವೆ.

eco friendly Ganesh idol
ಗೋಮಯ ಗಣಪತಿ

By

Published : Sep 3, 2021, 8:56 PM IST

ತುಮಕೂರು: ಕೊರೊನಾ ಹಿನ್ನೆಲೆಯಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಕಡಿವಾಣ​ ಬಿದ್ದಿದೆ. ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ಪರಿಸರಸ್ನೇಹಿ ಗಣೇಶನ ಆರಾಧನೆಯತ್ತ ಜನರು ಮುಖ ಮಾಡಿದ್ದು, ಸಗಣಿಯಿಂದ ತಯಾರಿಸಿದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ.

ಗಣೇಶೋತ್ಸವಕ್ಕೆ ಗೋಮಯ ಗಣಪತಿ ಆಕರ್ಷಣೆ

ಜಿಲ್ಲೆಯ ಮಧುಗಿರಿ ತಾಲೂಕಿನ ಚೆನ್ನಮಲ್ಲೇನಹಳ್ಳಿಯಲ್ಲಿನ ಸುರಭಿ ಗೋ ಶಾಲೆಯ ನಿರ್ವಾಹಕರಾದ ಮಧುಸೂಧನ್ ಮತ್ತು ರಮಾ ಎಂಬ ದಂಪತಿ ಸುಮಾರು 80 ದೇಸಿ ಬಿಡಾಡಿ ಜಾನುವಾರುಗಳನ್ನು ಪೋಷಣೆ ಮಾಡುತ್ತಿದ್ದಾರೆ. ಈ ಬಾರಿ ಗಣೇಶ ಹಬ್ಬಕ್ಕೆ ದಂಪತಿ, ಗೋಮಯ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಸಂಪ್ರದಾಯದ ಪ್ರತೀಕ:

ಗೋಮಯ ಗಣಪತಿಯನ್ನು ತಯಾರಿಸಲು ಶೇ.60ರಷ್ಟು ಮಣ್ಣು ಹಾಗೂ ಶೇ.40ರಷ್ಟು ಸಗಣಿಯನ್ನು ಬಳಸಲಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಪೂಜೆ ಆರಂಭಕ್ಕೂ ಮುನ್ನ ಮೊದಲ ಸಗಣಿಯಿಂದ ಪಿಳ್ಳಾರಿ ಗಣಪತಿ ಪೂಜೆ ಮಾಡುವ ಸಂಪ್ರದಾಯವಿದೆ. ಮೊದಲ ಪೂಜೆ ಅಧಿಪತಿ ಗಣಪತಿಯಾಗಿದ್ದು, ಹಸುವಿನ ಸಗಣಿಯಿಂದ ಮಾಡಿದ ಸಣ್ಣ ಹುಂಡೆಗೆ ಗರಿಕೆ ಇಟ್ಟು ಪೂಜಿಸಲಾಗುತ್ತದೆ. ಇದು ಪೂಜೆ ಶ್ರೇಷ್ಠ ಎಂಬ ನಂಬಿಕೆ ಇದೆ.

ಗೋಮಯ ಗಣಪತಿ ತಯಾರಿಕೆ

ಗೋಮಯ ಗಣಪತಿ ಅನುಕೂಲ:

ಈ ಗಣೇಶ ಮೂರ್ತಿಗಳನ್ನು ಪೂಜಿಸಿದ ಬಳಿಕ ನೀರಿನಲ್ಲಿ ವಿಸರ್ಜನೆಯಾದ ಅರ್ಧ ಗಂಟೆಯಲ್ಲಿ ಮೂರ್ತಿ ಸಂಪೂರ್ಣ ಕರಗಿ ಬಿಡುತ್ತದೆ. ಗಿಡಗಳಿಗೂ ಇದು ಒಳ್ಳೆಯ ಗೊಬ್ಬರವಾಗಿ ರೂಪಾಂತರವಾಗುತ್ತದೆ. ಈ ಗಣೇಶನ ಮೂರ್ತಿಗಳ ಬಳಕೆ ಪರಿಸರ ಸಂರಕ್ಷಣೆ ಸೇರಿದಂತೆ ಗೃಹ ಕೈಗಾರಿಕೆಗಳಿಗೂ ಕೂಡ ಶಕ್ತಿ ತುಂಬುತ್ತವೆ.

ಇದನ್ನೂಓದಿ: ಶೇ.75ರಷ್ಟು ಜನರಲ್ಲಿ ಕೊರೊನಾ ಪ್ರತಿರೋಧಕ ಶಕ್ತಿ ಉತ್ಪತ್ತಿ.. ಅಬ್ಬಾ! ಬದುಕಿತು ಬೆಂಗಳೂರು..

ABOUT THE AUTHOR

...view details